ವೈದ್ಯಕೀಯ ತಪಾಸಣೆಗಾಗಿ ಅಮೆರಿಕಾಗೆ ತೆರಳಲಿರುವ ನಟ ರಜಿನಿಕಾಂತ್.

79
firstsuddi

ಹೈದಾರಾಬಾದ್ : ವೈದ್ಯಕೀಯ ತಪಾಸಣೆಗಾಗಿ ದಕ್ಷಿಣ ಭಾರತದ ಸೂಪರ್ ಸ್ಟಾರ್, ನಟ ರಜಿನಿಕಾಂತ್ ಅವರು ಅಮೆರಿಕಾಗೆ ತೆರಳಲಿದ್ದಾರೆ ಎಂಬ ಮಾಹಿತಿ ದೊರಕಿದೆ.

ಜೂನ್ 20ರಂದು ವಿಶೇಷ ವಿಮಾನದಲ್ಲಿ ಅಮೆರಿಕಾಗೆ ತೆರಳಲಿದ್ದು, ಅದಕ್ಕಾಗಿ ಕೇಂದ್ರ ಸರ್ಕಾರದ ಬಳಿ ಯುಎಸ್ ಗೆ ತೆರಳುವ ಅನುಮತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರ ರಜನಿಕಾಂತ್ ಅವರ ಮನವಿಯನ್ನು ಪುರಸ್ಕರಿಸಿ ಅನುಮತಿ ನೀಡಿದೆ ಎನ್ನಲಾಗಿದೆ.

ರಜಿನಿಕಾಂತ್ ಅವರ ಅಳಿಯ ಹಾಗೂ ನಟ ಧನುಷ್ ಸಿನಿಮಾ ಶೂಟಿಂಗ್ ಗಾಗಿ ತಮ್ಮ ಪತ್ನಿ, ಪುತ್ರನೊಂದಿಗೆ ಈಗಾಗಲೇ ಅಮೆರಿಕಾದಲ್ಲಿದ್ದಾರೆ. ರಜಿನಿಕಾಂತ್ ಅವರ ಜೊತೆ ಕುಟುಂಬದ ಸದಸ್ಯರು ಕೂಡ ವಿದೇಶಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.