ವಾಷಿಂಗ್ಟನ್ : ಮೈಕ್ರೋಸಾಫ್ಟ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ ಸತ್ಯ ನಾಡೆಲ್ಲಾ ಅವರು ನೇಮಕವಾಗಿದ್ದಾರೆ.
ಮೈಕ್ರೋಸಾಫ್ಟ್ ಕಂಪನಿಯು ನಿನ್ನೆ ಜಾನ್ ಡಬ್ಲ್ಯೂ ಥಾಂಪ್ಸನ್ ಅವರ ಅಧ್ಯಕ್ಷರ ಸ್ಥಾನದಲ್ಲಿ ಸತ್ಯ ನಾಡೆಲ್ಲಾ ಅವರನ್ನು ನೇಮಿಸಿದ್ದು, ಈ ಮೊದಲು ಸಂಸ್ಥೆಯ ಅಧ್ಯಕ್ಷರಾಗಿದ್ದ ಜಾನ್ ಡಬ್ಲ್ಯೂ ಥಾಂಪ್ಸನ್ ಅವರನ್ನು ಸ್ವತಂತ್ರ ನಿರ್ದೇಶಕರನ್ನಾಗಿ ಆಯ್ಕೆ ಮಾಡಲಾಗಿದೆ.
ಸತ್ಯ ನಾಡೆಲ್ಲಾ ಅವರು 2014ರ ಫೆಬ್ರವರಿಯಲ್ಲಿ ಸ್ವೀಚ್ ಬಲ್ಮೇರ್ ಅವರಿಂದ ಕಂಪನಿಯ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಕಂಪನಿಯ ಚೇರ್ಮನ್ ಆಗಿ ಅಧಿಕಾರ ಸ್ವೀಕರಿಸಲಿದ್ದಾರೆ.










