ಕೊಟ್ಟಿಗೆಹಾರ : ಬಾಳೂರು ಘಟಕದ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಹಾಗೂ ಮರ್ಕಲ್ ಗ್ರಾಮದ ಯುವಕರು ಮತ್ತು ಬೆಂಗಳೂರಿನ ಬ್ಯಾಂಕ್ ಉದ್ಯೋಗಿಗಳ ತಂಡ ಕೊರೊನಾ ಸೋಂಕಿತರ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.
ಕೊರೊನಾ ಸೋಂಕಿತ ಕುಟುಂಬ ಹಾಗೂ ವಿಧವೆಯರು, ವೃದ್ದರು, ಪಾಶ್ರ್ವವಾಯು ಪೀಡಿತ ವ್ಯಕ್ತಿಗಳಿಗೆ ದಿನಸಿ ವಸ್ತುಗಳ ಆಹಾರದ ಕಿಟ್‍ನ್ನು ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ಮರ್ಕಲ್ ನ ಯುವಕರು ಮತ್ತು ಬೆಂಗಳೂರಿನ ಬ್ಯಾಂಕ್ ಉದ್ಯೋಗಿಗಳಾದ ಇಂದ್ರನೀಲ್, ಕಾರ್ತಿಕ್, ಮೌಲ್ವಿ ಸಾಹುಲ್ ಹಮೀದ್ ಅವರು ಆಹಾರದ ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶೌರ್ಯ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಸೋಮಶೇಖರ್. ವಿಠಲ್, ದೀಪಕ್, ದಿಲೀಪ್, ಉಲ್ಲಾಸ್, ಸಾಗರ್,ನಾರಾಯಣ, ಸಂಜೀವ, ಸವಿನ, ಜೈಪಾಲ್, ಸಂದೇಶ್, ಸಚಿನ್, ಶಶಿಕುಮಾರ್, ಸುರೇಶ್, ಅರುಣ,ದಿನೇಶ್, ಅಶ್ವಥ್, ಅಭಿ, ರಾಜು, ಅನಿಲ, ಸಾಧನ, ಯೋಗೇಶ್ ಮುಂತಾದವರು ಇದ್ದರು.










