ಚಿದಾನಂದ ಸವದಿ ಅವರು ಕಾರು ಚಾಲನೆ ಮಾಡುತ್ತಿರಲಿಲ್ಲ: ಎಸ್ ಪಿ ಲೋಕೇಶ್ ಜಗಲಾಸರ್ ಪ್ರತಿಕ್ರಿಯೆ…

73
firstsuddi

ಬಾಗಲಕೋಟೆ : ಡಿಸಿಎಂ ಲಕ್ಷ್ಮಣ್ ಸವದಿ ಅವರ ಪುತ್ರನ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಾಸರ್ ಅವರು ಪ್ರತಿಕ್ರಿಯೆ ನೀಡಿದ್ದು, ಘಟನೆ ವೇಳೆ ಚಿದಾನಂದ ಸವದಿ ಚಾಲನೆ ಮಾಡ್ತಿರಲಿಲ್ಲ. ಚಾಲನ ಹನಮಂತಸಿಂಗ್ ರಜಪೂತ್ ಅವರು ಚಾಲನೆ ಮಾಡ್ತಾ ಇದ್ದರು. ದೇವಲಾಪುರ ಕ್ರಾಸ್ ಬಳಿ ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ಘಟನೆ ನಡೆದಿದೆ.ಐಪಿಸಿ 304 ಪ್ರಕಾರ ಪ್ರಕರಣ ದಾಖಲು ಮಾಡಲಾಗಿದೆ. ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಡ್ರಂಕ್ ಡ್ರೈವ್ ಎನ್ನೋದು ಸತ್ಯಕ್ಕೆ ದೂರವಾದದ್ದು. ವಾಹನ ಚಾಲನೆ ಮಾಡ್ತಾ ಇದ್ದ ಚಾಲಕನನ್ನು ವೈದ್ಯಕೀಯ ಪರೀಕ್ಷೆ ಮಾಡಲಾಗಿದೆ. ಘಟನಾ ಸ್ಥಳದಲ್ಲಿ ಇದ್ದ ಸ್ಥಳೀಯರ ಹೇಳಿಕೆ ಪಡೆಯಲಾಗಿದೆ. ಸಂಬಂಧಿಗಳ ವೀಡಿಯೋ ಸ್ಟೇಟ್ಮೆಂಟ್ ಮಾಡಲಾಗಿದೆ. ತನಿಖೆ ಮುಂದುವರೆದಿದೆ. ಘಟನೆ ಸಂಬಂಧ ಹುನಗುಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ. ಒಂದು ವೇಳೆ ಇಂಥವರೇ (ಚಿದಾನಂದಂ ವಾಹನ ಚಾಲನೆ ಮಾಡ್ತಿದ್ದರು) ಎಂಬ ಸಾಕ್ಷ್ಯಾಧಾರಗಳಿದ್ದರೆ ಸಲ್ಲಿಸಬಹುದು. ಅದನ್ನೂ ಪರಿಗಣಿಸಿ ತನಿಖೆ ನಡೆಸಲಾಗುವುದು ಎಂದು ಹೇಳಿದರು.