ಮುಂಬೈ : ಪ್ರಿಯಾಂಕಾ ಚೋಪ್ರಾ ಅವರು ಜುಲೈ 18ರಂದು 39ನೇ ವಯಸ್ಸಿಗೆ ಕಾಲಿಟ್ಟಿದ್ದು, ಈ ವಿಶೇಷ ದಿನದಂದು ಅವರ ಪತಿ ನಿಕ್ ಜೋನಸ್ ದುಬಾರಿ ಬೆಲೆಯುಳ್ಳ ವೈನ್ ನೀಡಿ ವಿಶ್ ಮಾಡಿದ್ದಾರೆ.
ನಿಕ್ ಅವರು 1982 ಶಟೊ ಮೂಟೌನ್ ರೋಥ್ ಚೈಲ್ಡ್ ವೈನ್ ಬಾಟಲಿಯನ್ನು ಪ್ರಿಯಾಂಕಾಗೆ ನೀಡಿದ್ದು, ಈ ಫೋಟೋವನ್ನು ಪ್ರಿಯಾಂಕಾ ಚೋಪ್ರಾ ಅವರು ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿ ಸಂಭ್ರಮಿಸಿದ್ದಾರೆ. ಈ ವೈನ್ ತುಂಬಾನೇ ದುಬಾರಿ ಹಾಗೂ ಅಪರೂಪದ ವೈನ್ ಆಗಿದ್ದು, 750 ಎಂಎಲ್ ಬಾಟಲಿಯ ಈ ವೈನ್ ಗೆ 1,31,375 ರೂಪಾಯಿ. ಇದನ್ನು ತಯಾರಿಸುವ ವಿಧಾನ ಕೂಡ ಬೇರೆ. ಹೀಗಾಗಿ, ಈ ವೈನ್ ಬೆಲೆ ಇಷ್ಟೊಂದು ದುಬಾರಿಯಾಗಿದೆ.










