ಚಿಕ್ಕಮಗಳೂರು : ಸಡಗರ, ಸಂಭ್ರಮದಿಂದ ಶಾಸಕ ಸಿ.ಟಿ.ರವಿಯವರ ಹುಟ್ಟುಹಬ್ಬ ಆಚರಣೆ…

153
firstsuddi

ಚಿಕ್ಕಮಗಳೂರು : ಶಾಸಕ ಸಿ.ಟಿ.ರವಿಯವರ ಹುಟ್ಟುಹಬ್ಬವನ್ನು ಸವಿತಾ ಸಮಾಜದ ಅವರ ಅಭಿಮಾನಿಗಳು ನಗರದಲ್ಲಿ ಇಂದು ಸಡಗರ ಸಂಭ್ರಮದಿಂದ ಆಚರಿಸಿದರು.

ಬೆಳಿಗ್ಗೆ ಶ್ರೀ ಬೋಳರಾಮೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಅಭಿಮಾನಿಗಳು ಶಾಸಕ ರವಿ ಅವರಿಗೆ ರಾಜಕೀಯವಾಗಿ ಇನ್ನೂ ಹೆಚ್ಚಿನ ಸ್ಥಾನಮಾನಗಳು ಲಭಿಸಲಿ ಎಂದು ಪ್ರಾರ್ಥಿಸಿದರು.ನಂತರ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ನಿರ್ಗತಿಕರು ಮತ್ತು ಭಿಕ್ಷುಕರಿಗೆ ಬೆಳಗಿನ ಉಪಾಹಾರವನ್ನು ವಿತರಿಸಿದರು.

ಈ ವೇಳೆ ಮಾತನಾಡಿದ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಜೆ.ಸತ್ಯನಾರಾಯಣ ಅಭಿವೃದ್ದಿಯ ತುಡಿತ ಮತ್ತು ಬಡವರು, ದೀನ ದಲಿತರ ಬಗ್ಗೆ ಕಾಳಜಿ ಹೊಂದಿರುವ ಕ್ರಿಯಾಶೀಲ ಶಾಸಕ ಸಿ.ಟಿ.ರವಿ ಅವರಿಗೆ ರಾಜ್ಯ ರಾಜಕೀಯದಲ್ಲಿ ಉನ್ನತ ಸ್ಥಾನ ಸಿಗಬೇಕು ಎಂದು ಒತ್ತಾಯಿಸಿದರು.

ಸವಿತಾ ಸ್ವಸಹಾಯ ಸಂಘದ ಅಧ್ಯಕ್ಷ ವಿಶ್ವನಾಥ್, ಭೀಮರಾವ್ ಯುವಕ ಸಂಘದ ಅಧ್ಯಕ್ಷ ಮುರುಗೇಶ್, ಮಂಗಳವಾದ್ಯ ಸಂಘದ ಅಧ್ಯಕ್ಷ ವಿ.ಮಂಜುನಾಥ್, ಖಜಾಂಚಿ ದಯಾನಂದ್, ಡಿ.ಎನ್.ಉಮೇಶ್, ತೇಗೂರು ವಿಜಯ್, ಮೆಹಬೂಬ್, ಕೈಮರ ನಟರಾಜ್, ಎಂ.ಗಣೇಶ್ ತಾಲ್ಲೂಕು ಸವಿತಾ ಸಮಾಜದ ಉಪಾಧ್ಯಕ್ಷ ಎನ್.ಸತೀಶ್, ದಲಿತ್ ಜನಸೇನಾ ಅಧ್ಯಕ್ಷ ಅನಿಲ್ ಆನಂದ್ ಹಾಜರಿದ್ದರು.