ಟೋಕಿಯೋ ಒಲಂಪಿಕ್ಸ್ 2020 : ಬೆಳ್ಳಿ ಪದಕ ಗೆದ್ದ ವೇಟ್ ಲಿಫ್ಟರ್ ಮೀರಾಬಾಯಿ ಚಾನು..!

145
firstsuddi

ಟೋಕಿಯೋ : ವೇಟ್ ಲಿಫ್ಟಿಂಗ್ ಮಹಿಳಾ 49 ಕೆಜಿ ವಿಭಾಗದಲ್ಲಿ ಮೀರಾಬಾಯಿ ಚಾನು ಅವರು ಬೆಳ್ಳಿ ಪದಕ ಗಳಿಸಿದ್ದು, ಈ ಮೂಲಕ ಭಾರತಕ್ಕೆ ಇದೇ ಮೊದಲ ಬಾರಿಗೆ ಒಲಿಂಪಿಕ್ ವೇಟ್ ಲಿಫ್ಟಿಂಗ್ ನಲ್ಲಿ ಬೆಳ್ಳಿ ಪದಕ ದೊರೆತಿದೆ.

ವೇಟ್ ಲಿಫ್ಟಿಂಗ್ ನಲ್ಲಿ ಎರಡನೇ ಶ್ರೇಣಿ ಪಡೆದ ಮೀರಾಬಾಯಿ ಚಾನು 110 ಕೆಜಿ ಭಾರವನ್ನು ಎತ್ತುವ ಮೂಲಕ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಝಿಹೈ ಹೌ ಒಟ್ಟು 210 ಕೆಜಿ ಭಾರವನ್ನು ಎತ್ತುವ ಮೂಲಕ ಮೊದಲ ಸ್ಥಾನ ಪಡೆದು ಚಿನ್ನದ ಪದಕ ತಮ್ಮದಾಗಿಸಿಕೊಂಡರೆ, ಇಂಡೋನೇಷ್ಯಾದ ಕ್ಯಾಂಟಿಕಾ ಐಸಾಹ್ 194 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.

ಮೀರಾಬಾಯಿ ಚಾನು ಸಾಧನೆಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದು, ಮೀರಾಬಾಯಿ ಚಾನು ಅವರ ಸಾಧನೆಯಿಂದ ದೇಶಕ್ಕೆ ಹೆಮ್ಮೆಯಾಗಿದೆ. ಆಕೆಯ ಯಶಸ್ಸು ಪ್ರತಿಯೊಬ್ಬ ಭಾರತೀಯರಿಗೂ ಪ್ರೇರಣೆ ಎಂದು ಟ್ವೀಟ್ ಮಾಡಿದ್ದಾರೆ.