ಹೈದರಾಬಾದ್ : ಬಿಜೆಪಿ ಮಾಜಿ ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್ ಮೃತದೇಹ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೇದಕ್ ಜಿಲ್ಲೆಯ ವೆಲ್ಡುರ್ತಿ ಮಂಡಲ ಮಂಗಳಪರ್ತಿ ಗ್ರಾಮ ಉಪನಗರದ ರಸ್ತೆ ಬದಿಯಲ್ಲಿ ಕಾರು ಉರಿಯುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ತಕ್ಷಣವೇ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ. ಪ್ರಕರಣದ ಮಾಹಿತಿ ಅರಿತ ಪೊಲೀಸರು ಸ್ಥಳಕ್ಕೆ ಆಗಮಿಸಿ ಕಾರಿನ ನೋಂದಣಿ ಸಂಖ್ಯೆಯ ಆಧಾರದಲ್ಲಿ ಮೇದಕ್ ಪಟ್ಟಣದ ಶ್ರೀನಿವಾಸ್ ದಿಗಾ ಅವರು ಎಂದು ಗುರುತಿಸಿದ್ದಾರೆ. ಈ ಕೃತ್ಯವನ್ನು ಯಾವುದೋ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಎಸಗಿರಬಹುದು ಎಂದು ಅನುಮಾನ ವ್ಯಕ್ತವಾಗಿದೆ.










