ಲಂಡನ್ : ನೈರುತ್ಯ ಇಂಗ್ಲೆಂಡ್ ನ ಪ್ಲೈಮೌತ್ ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಂದು ಮಗುವೂ ಸೇರಿದಂತೆ 6 ಮಂದಿ ಸಾವನ್ನಪ್ಪಿದ್ದಾರೆ.
ನಿನ್ನೆ ಸಂಜೆ ಈ ದುರ್ಘಟನೆ ನಡೆದಿದೆ. ಇಬ್ಬರು ಮಹಿಳೆಯರು, ಮೂವರು ಪುರುಷರು ಸ್ಥಳದಲ್ಲೇ ಬಲಿಯಾಗಿದ್ದು, ಈ ಪೈಕಿ ಸಾವಿಗೀಡಾದ ಓರ್ವನನ್ನು ಗುಂಡಿನ ದಾಳಿ ನಡೆಸಿದ್ದ ಆಗಂತುಕನೇ ಇರಬೇಕು ಎಂದು ಶಂಕಿಸಲಾಗಿದೆ. ಯಾವ ಕಾರಣಕ್ಕಾಗಿ ಗುಂಡಿನ ದಾಳಿ ನಡೆಸಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬರೋಬ್ಬರಿ 11 ವರ್ಷಗಳ ನಂತರ ಸಾಮೂಹಿಕ ಗುಂಡಿನ ದಾಳಿ ನಡೆದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಲ್ಲಿನ ಹೋಮ್ ಸೆಕ್ರೆಟರಿ ಪ್ರೀತಿ ಪಟೇಲ್, ಪ್ಲೈಮೌತ್ ನಲ್ಲಿ ನಡೆದ ದುರ್ಘಟನೆ ಅತ್ಯಂತ ಆತಂಕಕಾರಿಯಾಗಿದ್ದು, ಅದಕ್ಕಾಗಿ ವಿಷಾದಿಸುತ್ತೇನೆ. ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡವರ ಮನೆಯವರಿಗೆ ಸಾಂತ್ವನ ತಿಳಿಸುತ್ತೇನೆ ಎಂದು ಹೇಳಿದ್ದಾರೆ.










