ರಾಹುಲ್ ಗಾಂಧಿ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯ…

76
firstsuddi

ನವದೆಹಲಿ: ರಾಹುಲ್ ಗಾಂಧಿ ಅಧಿಕೃತ ಟ್ವಿಟ್ಟರ್ ಖಾತೆ ಮತ್ತೆ ಸಕ್ರಿಯಗೊಂಡಿದೆ.

ಕಳೆದ ವಾರ ರಾಹುಲ್ ಗಾಂಧಿ 9 ವರ್ಷದ ಅತ್ಯಾಚಾರಕ್ಕೀಡಾಗಿ ಹತ್ಯೆಗೀಡಾದ ಬಾಲಕಿಯ ಕುಟುಂಬಸ್ಥರ ಫೋಟೋವನ್ನು ಪ್ರಕಟಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡ ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗ ಟ್ವಿಟ್ಟರ್ ಸಂಸ್ಥೆಗೆ ರಾಹುಲ್ ಗಾಂಧಿ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿತ್ತು. ಈ ದೂರಿನ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು. ಪಕ್ಷದ ಖಾತೆಯ ಜೊತೆಗೆ ಹಲವು ನಾಯಕರ ಮತ್ತು ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯನ್ನು ಕೂಡ ಬ್ಲಾಕ್ ಮಾಡಲಾಗಿತ್ತು.

ಇಂದು ಕಾಂಗ್ರೆಸ್ ಪಕ್ಷದ ಟ್ವಿಟ್ಟರ್ ಖಾತೆ ಸಕ್ರಿಯಗೊಂಡಿದ್ದು, ಸತ್ಯಮೇವ ಜಯತೇ ಎಂದು ಬರೆದು ಕಾಂಗ್ರಸ್ ಪಕ್ಷ ಟ್ವೀಟ್ ಮಾಡಿದೆ. ಎಲ್ಲ ಕಾಂಗ್ರೆಸ್ ಖಾತೆಗಳು ಕೂಡ ಮರುಸ್ಥಾಪನೆ ಆಗಿದೆ.

ಶನಿವಾರ ರಾಹುಲ್ ಗಾಂಧಿ ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ನಮಗೆ ಸಂಸತ್ ನಲ್ಲಿ ಮಾತನಾಡಲು ಅವಕಾಶ ಕೊಟ್ಟಿಲ್ಲ. ಭರವಸೆ ಬೆಳಕಾಗಿ ಟ್ವಿಟ್ಟರ್ ಇದೆ ಎಂದು ಭಾವಿಸಿದ್ದೆ. ಆದರೆ ಟ್ವಿಟ್ಟರ್ ಆ ರೀತಿ ಇಲ್ಲ. ಸರ್ಕಾರದ ಪರವಾಗಿ ಟ್ವಿಟ್ಟರ್ ಕೆಲಸ ಮಾಡುತ್ತಿದೆ ಎಂದು ಟ್ವಿಟ್ಟರ್ ವಿರುದ್ಧ ಕಿಡಿ ಕಾರಿದ್ದರು.