ವಾಜಪೇಯಿಗೆ ಸಂಜೆ ಎರಡು ಪೆಗ್ ಡ್ರಿಂಕ್ ಬೇಕಾಗಿತ್ತಂತೆ : ಶಾಸಕ ಪ್ರಿಯಾಂಕ್ ಖಗ್ರೆ ವಿವಾದಾತ್ಮಕ ಹೇಳಿಕೆ…

77
firstsuddi

ಕಲಬುರಗಿ : ಸಿಟಿ ರವಿಯವರ ಹುಕ್ಕಾ ಬಾರ್ ಹೇಳಿಕೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪ್ರಿಯಾಂಕ್ ಖಗ್ರೆ ಅವರು, ವಾಜಪೇಯಿ ಅವರು ಹೆಚ್ಚು ಮದ್ಯಪಾನ ಮಾಡುತ್ತಿದ್ದರಂತೆ, ಅವರಿಗೆ ಸಂಜೆ ಹೊತ್ತು 2 ಗ್ಲಾಸ್ ವಿಸ್ಕಿ ಬೇಕಾಗಿತ್ತಂತೆ. ಸಿಗರೇಟ್ ಹಾಗೂ ಮದ್ಯಪಾನ ಮಾಡುವುದು ತಪ್ಪಲ್ಲ. ಹಾಗಂತ ನೀವು ಎಲ್ಲಾ ಬಾರ್ ಗಳಿಗೂ ವಾಜಪೇಯಿ ಬಾರ್ ಎಂದು ಹೆಸರಿಡುತ್ತೀರಾ? ಎಂದು ಸಿ.ಟಿ. ರವಿ ವಿರುದ್ಧ ಹರಿಹಾಯ್ದಿದ್ದಾರೆ.

ಸಾಮಾನ್ಯವಾಗಿ ಆರ್ ಎಸ್ ಎಸ್ ನಲ್ಲಿ ಇರುವವರು ಸಸ್ಯಾಹಾರಿಗಳು ಎಂದು ನಾವು ಭಾವಿಸುತ್ತೇವೆ. ಆದರೆ ವಾಜಪೇಯಿಯವರು ಮಾಂಸಹಾರಿ ಪ್ರಿಯರು. ಆದರೆ ಮಾಂಸ ಸೇವಿಸುವುದರಿಂದ ಗೌರವ ಕಡಿಮೆಯಾಗುತ್ತಾ? ಇವರು ಮಾತನಾಡುವುದರಿಂದ, ನಾವು ಮಾತನಾಡುವುದರಿಂದ ನೆಹರೂ ಘನತೆಯಾಗಲಿ, ವಾಜಪೇಯಿ ಘನತೆಯಾಗಲಿ ಕಡಿಮೆಯಾಗುವುದಿಲ್ಲ. ಯಾವಾಗ ಏನು ಮಾತನಾಡಬೇಕೆಂದು ತಿಳಿದುಕೊಂಡು ಮಾತನಾಡಬೇಕು. ಮೊದಲನೇಯದಾಗಿ ಇವರಿಗೆ ಇವರ ನಾಯಕರ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಅವರ ಏನು ಕೊಡುಗೆ ಇದೆ ಅಂತ ಅವರ ಹೆಸರನ್ನು ಪ್ಲೈ ಓವರ್ಗೆ ಇಡುತ್ತಾರೆ..? ಗೋಡ್ಸೆಯನ್ನು ನಂಬುತ್ತಾರೆ. ಗಾಂಧಿಯವರನ್ನು ನಂಬಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದರೆ ಹಿಂಗೆ ಮಾತಾನಾಡುವುದು. ಇವರು ಅವಿವೇಕಿಗಳು ಎಂದು ಸಿಟಿ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.