ಉಡುಪಿ : ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲ ಜನದ್ರೋಹ ಯಾತ್ರೆ ಎಂಬ ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕಗೆ ತಿರುಗೇಟು ನೀಡಿರುವ ಕೋಟ ಶ್ರೀನಿವಾಸ ಪೂಜಾರಿ ಅಫ್ಘಾನಿಸ್ತಾನ ದೇಶದ ಬೆಳವಣಿಗೆಯಿಂದಾದರೂ ತಾಲಿಬಾನ್ ಸಂಸ್ಕೃತಿಯನ್ನು ಬೆಂಬಲಿಸುವ ಕಾಂಗ್ರೆಸ್ ತನ್ನ ಅಭಿಪ್ರಾಯವನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮದು ಜನಾಶೀರ್ವಾದ ಇರುವ ಸರ್ಕಾರ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಜನಾಶೀರ್ವಾದದ ಸರ್ಕಾರ ನೀಡುತ್ತಿದ್ದಾರೆ ಎಂದರು. ಬಿಜೆಪಿ ತಾಲಿಬಾನ್ ಒಂದೇ ಸಂಸ್ಕೃತಿ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಇದು ತಾಲಿಬಾನ್ ಸಂಸ್ಕೃತಿಯನ್ನು ಪ್ರೀತಿಸುವವರ ಹೇಳಿಕೆ. ಆಗಾಗ ತಾಲಿಬಾನ್ ಮೇಲೆ ಇವರಿಗೆ ಒಳ್ಳೆಯ ಭಾವನೆ ಬರುತ್ತದೆ. ಅಲ್ಲಿಯ ದುರಂತವನ್ನು ನೋಡಿಯಾದರೂ ಈ ಸಂಸ್ಕೃತಿಯನ್ನು ಬೆಂಬಲಿಸಬೇಡಿ ಎಂದು ಸಚಿವ ಕೋಟ ಹೇಳಿದರು.










