ದರೋಡೆ ವೇಳೆ ಶೂಟೌಟ್ ಪ್ರಕರಣ ; ಮೂವರ ಬಂಧನ…

71
firstsuddi

ಮೈಸೂರು : ಚಿನ್ನದಂಗಡಿ ದರೋಡೆ ವೇಳೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಮೈಸೂರಿನ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ :
ಆಗಸ್ಟ್ 23 ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್ ನಲ್ಲಿ ದರೋಡೆ ವೇಳೆ ಶೂಟ್ ಔಟ್ ನಡೆದಿತ್ತು. ಮಾಲೀಕನಿಗೆ ಥಳಿಸಿ ಚಿನ್ನಾಭರಣ ದರೋಡೆ ಮಾಡಲಾಗಿತ್ತು. ಅಲ್ಲದೆ ಚಿನ್ನದ ಅಂಗಡಿಗೆ ಬಂದಿದ್ದ ಚಂದ್ರು ಎಂಬ ಯುವಕನ ಮೇಲೆ ಗುಂಡು ಹಾರಿಸಿದ್ದರು. ಪರಿಣಾಮ ಚಂದ್ರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ದರೋಡೆಕೋರರ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ರಾಜಸ್ಥಾನ ಮೂಲದ ಇಬ್ಬರು ಹಾಗೂ ಓರ್ವ ಸ್ಥಳೀಯನನ್ನು ಮಹಾರಾಷ್ಟ್ರದ ಪುಣೆ ಏರ್ಪೋರ್ಟ್ ನಲ್ಲಿ ಬಂಧಿಸಲಾಗಿದೆ.