ಕಾಬೂಲ್ : ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ಈಗ ಪೂರ್ಣ ಪ್ರಮಾಣದಲ್ಲಿ ಷರಿಯಾ ಕಾನೂನು ಜಾರಿಗೊಳಿಸಿ ಮಹಿಳೆಯರಿಗೆ ಕ್ರೀಡೆಯನ್ನು ನಿಷೇಧಿಸಿದ್ದಾರೆ.
‘ಇದು ಮಾಧ್ಯಮ ಯುಗ, ಮತ್ತು ಫೋಟೋಗಳು ಮತ್ತು ವೀಡಿಯೊಗಳು ಇರುತ್ತವೆ, ಮತ್ತು ನಂತರ ಜನರು ಅದನ್ನು ವೀಕ್ಷಿಸುತ್ತಾರೆ. ಇಸ್ಲಾಂ ಮತ್ತು ಇಸ್ಲಾಮಿಕ್ ಎಮಿರೇಟ್ ಮಹಿಳೆಯರಿಗೆ ಕ್ರಿಕೆಟ್ ಆಡಲು ಅಥವಾ ಅವರು ಬಹಿರಂಗಪಡಿಸುವ ರೀತಿಯ ಕ್ರೀಡೆಗಳನ್ನು ಆಡಲು ಅನುಮತಿಸುವುದಿಲ್ಲ. ಮಹಿಳೆಯರನ್ನು ಈ ರೀತಿ ನೋಡಲು ಇಸ್ಲಾಂ ಅನುಮತಿಸುವುದಿಲ್ಲ. ಕ್ರೀಡೆಗಳಲ್ಲಿ ಪಾಲ್ಗೊಂಡರೆ ದೇಹ ಪ್ರದರ್ಶನವಾಗುತ್ತದೆ ಎಂದು ತಾಲಿಬಾನ್ ಸಾಂಸ್ಕೃತಿಕ ಆಯೋಗದ ಉಪ ಮುಖ್ಯಸ್ಥ ಅಹ್ಮದುಲ್ಲಾ ವಾಸಿಕ್ ಹೇಳಿದ್ದಾರೆ.
ತಾಲಿಬಾನ್ ಆಡಳಿತದಲ್ಲಿ ಪಿಹೆಚ್ ಡಿಗಳಿಗೆ, ಪದವಿಗಳಿಗೆ ಬೆಲೆ ಇಲ್ಲ. ನೀವೇ ನೋಡಿ ಅಧಿಕಾರ ನಡೆಸ್ತಿರುವ ಮುಲ್ಲಾಗಳು, ತಾಲಿಬಾನಿಗಳಿಗೆ ಪಿಹೆಚ್ ಡಿಯ ಕೋಡು ಇವೆಯಾ? ಅವರಿಗೆ ಕನಿಷ್ಠ ಹೈಸ್ಕೂಲ್ ಶಿಕ್ಷಣ ಕೂಡ ಇಲ್ಲ. ಆದ್ರೂ ಎಲ್ಲರಿಗಿಂತ ಉತ್ತಮ ಆಡಳಿತ ನೀಡ್ತಿದ್ದು, ಅವರೇ ಎಲ್ಲರಿಗಿಂತ ಶ್ರೇಷ್ಠ ಎಂದು ತಾಲಿಬಾನ್ ಸರ್ಕಾರದ ಶಿಕ್ಷಣ ಮಂತ್ರಿ ಶೇಖ್ ಮೌಲ್ವಿ ನೂರಲ್ಲಾ ಹೇಳಿದ್ದಾರೆ.










