ಚಿಕ್ಕಮಗಳೂರು : ಕೇಂದ್ರದ ಮಾಜಿ ಸಚಿವ. ಕಾಂಗ್ರೆಸ್‍ನ ಹಿರಿಯ ನಾಯಕ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಕಾಫಿ ಮಂಡಳಿ ಮಾಜಿ ಸದಸ್ಯ ಡಿ.ಎಂ.ವಿಜಯ್ ತೀವ್ರ ಸಂತಾಪ ಸೂಚಿಸಿದ್ದಾರೆ
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕುಟುಂಬಕ್ಕೆ ಆಪ್ತರಾಗಿದ್ದ ರಾಜಕೀಯ ಕ್ಷೇತ್ರದಲ್ಲಿ ಅಜಾತ ಶತ್ರುವಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರು ತಮ್ಮ ಕೊನೆಯ ಉಸಿರಿನವರೆಗೂ ಕಾಂಗ್ರೆಸ್ ನ ಆಧಾರ ಸ್ಥಂಭವಾಗಿದ್ದರು.ಶುದ್ದ ಹಸ್ತರು ಪ್ರಾಮಾಣಿಕ ರಾಜಕಾರಣಿಯಾಗಿದ್ದರುಎಂದು ಹೇಳಿದ್ದಾರೆ
ಎರಡು ಸಾವಿರ ಇಸವಿಯಲ್ಲಿ ಕಾಫಿ ಉದ್ಯಮ ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಆಸ್ಕರ್ ಫರ್ನಾಂಡಿಸ್ ಅವರು ಸೋನಿಯಾಗಾಂದಿ.ಅಂದಿನ ಪ್ರದಾನಿ ಮನ್ ಮೋಹನ್ ಸಿಂಗ್ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಅವರಿಗೆ ಬೆಳಗಾರರ ಸ್ಥಿತಿಯನ್ನು ಮನವರಿಕೆ ಮಾಡಿ ಅವರ ಮನವೊಲಿಸಿ 2010 ರ ವರೆಗೂ ಅನೇಕ ಪ್ಯಾಕೇಜ್ ಗಳನ್ನು ಕೊಡಿಸಿದ್ದರು. ಬೆಳೆಗಾರರ ಒಕ್ಕೂಟ ಮತ್ತು ಬೆಳೆಗಾರರ ನಿಯೋಗಕ್ಕೆ ಹಲವು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿಸಿದ್ದರು ಎಂದು ಸ್ಮರಿಸಿದ್ದಾರೆ.










