ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ; ಕೇವಲ 500 ರೂಪಾಯಿಗೆ ಪ್ರಾಣ ಕಳೆದುಕೊಂಡನಾ..?

80
firstsuddi

ಬೆಂಗಳೂರು : ಸಂಜಯ್ ನಗರದ ಬಸ್ ನಿಲ್ದಾಣ ಬಳಿ ಪಿಯುಸಿ ವಿದ್ಯಾರ್ಥಿ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, 500 ರೂಪಾಯಿ ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ತಂದೆ ಜೊತೆ ಮಗಳ ಮಗ ಮಾಡಿಕೊಂಡಿದ್ದ. ಇದೇ ಕಾರಣಕ್ಕಾಗಿ ತಂದೆಯ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾ? ಎಂಬುದರ ಬಗ್ಗೆಯೂ ಪರಿಶೀಲಿಸುತ್ತಿದ್ದಾರೆ.

ರಾಹುಲ್ ಭಂಡಾರಿ ನಿನ್ನೆ ತಂದೆ ಬಳಿ 500 ರೂಪಾಯಿ ಕೇಳಿದ್ದಾನೆ. ಆದರೆ ತಂದೆ ಹಣ ಕೊಡಲು ನಿರಾಕರಿಸಿದ್ದು, ಕಾರಣವಿಲ್ಲದೆ ಹಣ ನೀಡುವುದಿಲ್ಲ ಎಂದು ಗದರಿಸಿದ್ದಾರೆ. ಇದರಿಂದ ಬೇಸರಗೊಂಡ ರಾಹುಲ್ ಇಂದು ಮುಂಜಾನೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.

ಇನ್ನೂ ಎಫ್ ಎಸ್ ಎಲ್ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಾಧಾರ ಕಲೆ ಹಾಕಿದ್ದಾರೆ. ಅಲ್ಲದೇ ಯುವಕನ ಬ್ಯಾಗ್ ನಲ್ಲಿದ್ದ ಪ್ರಶ್ನೆ ಪತ್ರಿಕೆ, ಮೆಂಟೋಸ್ ಚಾಕಲೇಟ್ ಹಾಗೂ ಒಂದು ಬುಲೆಟ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.