ದೆಹಲಿ ರೋಹಿಣಿ ಕೋರ್ಟ್ ನಲ್ಲಿ ಗುಂಡಿನ ದಾಳಿ ; ಗ್ಯಾಂಗ್ ಸ್ಟರ್ ಸೇರಿ ನಾಲ್ವರು ಸಾವು…

76
firstsuddi

ನವದೆಹಲಿ : ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲಿ ಗುಂಡಿನ ದಾಳಿ ನಡೆದಿದ್ದು, ಗ್ಯಾಂಗ್ ಸ್ಟರ್ ಜಿತೇಂದರ್ ಗೋಗಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ.

ವಕೀಲರ ಉಡುಪಿನಲ್ಲಿ ಬಂದಿರುವ ಗ್ಯಾಂಗ್ ಸ್ಟರ್ ಗಳು ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದು ಬಂದಿದೆ. ನಟೋರಿಯಸ್ ಗ್ಯಾಂಗ್ ಸ್ಟರ್ ಆಗಿದ್ದ ಗೋಗಿ ಅನೇಕ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಈತನನ್ನು ಇಂದು ದೆಹಲಿಯ ರೋಹಿಣಿ ಕೋರ್ಟ್ ಗೆ ಪೊಲೀಸರು ವಿಚಾರಣೆಗೆ ಕರೆತರುವ ವೇಳೆ ದುಷ್ಕರ್ಮಿಗಳು ಗುಂಡು ಹಾರಿಸಿದ್ದಾರೆ. ಫೈರಿಂಗ್ ನಲ್ಲಿ ಗ್ಯಾಂಗ್ ಸ್ಟರ್ ಗೋಗಿ ಮೃತಪಟ್ಟಿದ್ದಾನೆ, ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ ನಡೆಸಿದ್ದ ಆರೋಪಿಗಳ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿರುವ ಪರಿಣಾಮ ಮೂವರು ದಾಳಿಕೋರರು ಸಹ ಸಾವಿಗೀಡಾಗಿದ್ದಾರೆ ದೆಹಲಿ ಪೊಲೀಸ್ ವಿಶೇಷ ವಿಭಾಗ ತಿಳಿಸಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ದೆಹಲಿ ಪೊಲೀಸರಿಂದ ಗ್ಯಾಂಗ್ ಸ್ಟರ್ ಜಿತೇಂದ್ರ ಬಂಧನವಾಗಿತ್ತು.