ವಿಧಾನ ಪರಿಷತ್ ಚುನಾವಣಾ ಕಾವು ; ಬಸವರಾಜ ಹೊರಟ್ಟಿ ಬೆಂಬಲಿಗನಿಂದ ಬೆದರಿಕೆ ಆರೋಪ…

83
firstsuddi

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣಾ ಕಾವು ಏರುತ್ತಿದೆ. ಚುನಾವಣೆಗೆ ಸಾಕಷ್ಟು ದಿನಗಳು ಬಾಕಿ ಇವೆ. ಆದ್ರೆ ತಮ್ಮ ತಮ್ಮ ಅಭ್ಯರ್ಥಿಗಳ ಪರ ಅಭಿಮಾನಿಗಳು ಈಗಿನಿಂದಲೇ ಬ್ಯಾಟ್ ಬೀಸುತ್ತಿದ್ದಾರೆ. ತಮ್ಮ ಅಭ್ಯರ್ಥಿ ಪರ ಅಪಪ್ರಚಾರ ಮಾಡುತ್ತಿದ್ದಾರೆಂದು ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿಯವರ ಬೆಂಬಲಿಗರೊಬ್ಬರು ವ್ಯಕ್ತಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ.

ಹೊರಟ್ಟಿಯವರ ಬೆಂಬಲಿಗ ಗಜಾನನ ಅನ್ವೇಕರ್, ರವೀಂದ್ರ ಪಾಟೀಲ್ ಎಂಬವರಿಗೆ ಜೀವ ಬೆದರಿಕೆ ಹಾಕಿರುವ ಬಗ್ಗೆ ಆರೋಪ ಕೇಳಿ ಬಂದಿದೆ. ಬಸವರಾಜ್ ಹೊರಟ್ಟಿಯವರ ವಿರುದ್ಧ ಸಂಘ ಮಾಡಿ ಮತ್ತು ಚುನಾವಣೆಯಲ್ಲಿ ಅವರ ವಿರುದ್ಧ ಪ್ರಚಾರ ಮಾಡಬಾರದು ಎಂದು ರವೀಂದ್ರ ಪಾಟೀಲ್ ಎಂಬುವರಿಗೆ ಅವಾಜ್ ಹಾಕಲಾಗಿದೆ.

ತನ್ನ ಸಹಚರರೊಂದಿಗೆ ಆಗಮಿಸಿದ ಗಜಾನನ ಹಾಗೂ ತನ್ನಿಬ್ಬರು ಸಹಚರರು ರವಿಚಂದ್ರ ಅವರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಈ ಕುರಿತು ಅಶೋಕ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.