ರಾಯನ್ ರಾಜ್ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ…

72
firstsuddi

ಬೆಂಗಳೂರು : ಸ್ಯಾಂಡಲ್‍ ವುಡ್ ನ ದಿವಂಗತ ನಟ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಪುತ್ರ ರಾಯನ್ ರಾಜ್ ಸರ್ಜಾಗೆ ಹುಟ್ಟುಹಬ್ಬದ ಸಂಭ್ರಮ. ರಾಯನ್ ಸರ್ಜಾ ಹುಟ್ಟಿ ಇಂದಿಗೆ ಒಂದು ವರ್ಷ ಕಳೆದಿದ್ದು, ಮಗನ ಹುಟ್ಟುಹಬ್ಬದ ಪ್ರಯುಕ್ತ ಮೇಘನಾ ರಾಜ್ ಫೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಪ್ರೀತಿಯ ಮಗನಿಗೆ ವಿಶ್ ಮಾಡಿದ್ದಾರೆ. 

ಮೇಘನಾ, ರಾಯನ್ ರಾಜ್ ಸರ್ಜಾನನ್ನು ಬಿಗಿದಪ್ಪಿಕೊಂಡಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ. ನಮ್ಮ ಮಗು.. ನಮ್ಮ ಜಗತ್ತು.. ನಮ್ಮ ವಿಶ್ವ.. ನಮಗೆ ಎಲ್ಲ.. ಚಿರು ನಮ್ಮ ಪುಟ್ಟ ರಾಜಕುಮಾರನಿಗೆ 1 ವರ್ಷವಾಗಿದೆ. ಅವನು ಅಮ್ಮಾ ನಿಲ್ಲಿಸು ಎಂದು ಹೇಳುವವರೆಗೂ ನಾನು ರೇಗಿಸುತ್ತಲೇ ಇರುತ್ತೇನೆ. ಅವನು ತನ್ನ ಕಣ್ಣುಗಳನ್ನು ನನ್ನ ಕಡೆ ತಿರುಗಿಸಿ ನೋಡುವವರೆಗೂ ಚುಂಬಿಸುತ್ತಲೇ ಇರುತ್ತೇನೆ. ಐ ಲವ್ ಯೂ ಕಂದ.. ನೀನು ಬಹಳ ಬೇಗ ಬೆಳೆದೆ. ಹುಟ್ಟುಹಬ್ಬದ ಶುಭಾಶಯಗಳು ರಾಯನ್ ಎಂದು ಶುಭಾಶಯ ತಿಳಿಸಿದ್ದಾರೆ. ಒಟ್ಟಾರೆ ಮಗನ ಹುಟ್ಟುಹಬ್ಬವನ್ನು ಇಂದು ಸಡಗರದಿಂದ ಆಚರಿಸುತ್ತಿದ್ದಾರೆ.