ವಿಚಾರಣೆಗೆ ತಡವಾಗಿ ಬಂದಿದ್ದಕ್ಕೆ ಅನನ್ಯಾ ಪಾಂಡೆಗೆ ಎನ್‍ಸಿಬಿ ತರಾಟೆ…

79
firstsuddi

ಮುಂಬೈ : ಬಾಲಿವುಡ್ ನಟಿ ಅನನ್ಯಾ ಪಾಂಡೆ ವಿಚಾರಣೆಗೆ ತಡವಾಗಿ ಬಂದಿದ್ದಕ್ಕೆ ಎನ್‌ಸಿಬಿ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಅನನ್ಯಾಗೆ ನಿನ್ನೆ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಎನ್‌ಸಿಬಿ ಸೂಚಿಸಿತ್ತು. ಆದರೆ, ಅನನ್ಯಾ ಮಧ್ಯಾಹ್ನ 2 ಗಂಟೆಗೆ ಎನ್‌ಸಿಬಿ ಕಚೇರಿಗೆ ಬಂದಿದ್ದರು. ಇದರಿಂದ ಕೋಪಗೊಂಡಿದ್ದ ಸಮೀರ್ ವಾಂಖೆಡೆ, ಅನನ್ಯಾ ಬರುತ್ತಿದ್ದಂತೆಯೇ, “ಮನಸ್ಸಿಗೆ ಬಂದ ಸಮಯದಲ್ಲಿ ಆಗಮಿಸಲು ಇದು ಸಿನಿಮಾ ಪ್ರೊಡಕ್ಷನ್ ಹೌಸ್ ಅಲ್ಲ. ಇದು ಕೇಂದ್ರದ ತನಿಖಾ ಸಂಸ್ಥೆ. ಇನ್ಮೇಲೆ ಸರಿಯಾದ ಸಮಯಕ್ಕೆ ವಿಚಾರಣೆಗೆ ಹಾಜರಾಗಬೇಕು ” ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. 

ಐಷಾರಾಮಿ ಹಡಗಿನಲ್ಲಿ ರೇವ್ ಪಾರ್ಟಿ ಮಾಡಿ ಸಿಕ್ಕಿಬಿದ್ದಿರುವ ಆರ್ಯನ್ ಖಾನ್ ನನ್ನು ವಿಚಾರಣೆ ನಡೆಸುತ್ತಿರುವ ಎನ್‌ಸಿಬಿ ಅಧಿಕಾರಿಗಳು, ಅನನ್ಯಾ ಮತ್ತು ಆರ್ಯನ್ ಖಾನ್ ನಡುವೆ ಕೆಲವು ವಾಟ್ಸ್ಆ್ಯಪ್ ಚಾಟ್ ಗಳು ಮೊಬೈಲ್ ಫೋನ್ ನಲ್ಲಿ ಪತ್ತೆಯಾದ ಬಳಿಕ ನಟಿಯನ್ನು ಎರಡು ಬಾರಿ ಕರೆದು ವಿಚಾರಣೆ ನಡೆಸಿದ್ದಾರೆ.