ಅಪ್ಪು ಜೊತೆ ಕಳೆದ ಕ್ಷಣ ನೆನೆದು ಬಿಕ್ಕಿ ಬಿಕ್ಕಿ ಅತ್ತ ನಟ ಸೂರ್ಯ.

79
firstsuddi

ಬೆಂಗಳೂರು : ಕಂಠೀರವ ಸ್ಟುಡಿಯೋಗೆ ಭೇಟಿ ಕೊಟ್ಟ ತಮಿಳಿನ ನಟ ಸೂರ್ಯ ಪುನೀತ್ ಜೊತೆಗೆ ಕಳೆದ ಸಿಹಿ ಕ್ಷಣಗಳನ್ನು ನೆನಪಿಸಿಕೊಂಡು ಸಮಾಧಿ ಮುಂದೆ ನಿಂತು ಬಿಕ್ಕಿಬಿಕ್ಕಿ ಅತ್ತರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಹಾಗೂ ಡಾ. ರಾಜ್ ಕುಮಾರ್ ಅವರ ಕುಟುಂಬ ಬಹಳ ಆತ್ಮೀಯತೆ ಮತ್ತು ಉತ್ತಮ ಬಾಂಧವ್ಯ ಹೊಂದಿದ್ದೇವೆ. ನನಗೆ 4 ತಿಂಗಳು ಆಗಿದ್ದಾಗ ಅಪ್ಪುಗೆ 7 ತಿಂಗಳಾಗಿತ್ತು ಎಂದು ಅಮ್ಮ ಹೇಳುತ್ತಿದ್ದ ಮಾತು ನನಗೆ ಈಗಲೂ ಕೂಡ ನೆನಪಿನಲ್ಲಿದೆ. ಯಾರು ಪುನೀತ್ ರನ್ನು ನಿಜವಾಗಿಯೂ ಪ್ರೀತಿಸುತ್ತಾರೆ ಅವರ ನೆನಪುಗಳನ್ನು ಸದಾ ಮನದಲ್ಲಿಟ್ಟುಕೊಂಡಿರುತ್ತಾರೆ. ಅಪ್ಪು ಯಾವಾಗಲೂ ನಮ್ಮ ಹೃದಯದಲ್ಲಿ ನಗುತ್ತಲೇ ಇರುತ್ತಾರೆ. ಪುನೀತ್ ಆತ್ಮಕ್ಕೆ ಶಾಂತಿ ಸಿಗಲಿ ಅಂತ ಪ್ರಾರ್ಥಿಸುತ್ತೇನೆ ಎಂದು ಭಾವುಕರಾದರು.