ಮುಂಬೈ : ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಹಾಗೂ ಶ್ರೀರಾಮ್ ನೆನೆ ಅವರ ಕಿರಿಯ ಪುತ್ರ ರಿಯಾನ್ ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡಿದ್ದಾರೆ.
ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನದಂದು (ನವೆಂಬರ್ 7) ರಿಯಾನ್ ತಮ್ಮ ತಲೆ ಕೂದಲನ್ನು ದಾನ ಮಾಡಿದ್ದು, ರಿಯಾನ್ ತಲೆ ಕೂದಲು ಕ್ಷೌರ ಮಾಡುತ್ತಿರುವ ವಿಡಿಯೋವನ್ನು ಮಾಧುರಿ ದೀಕ್ಷತ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ರಾಷ್ಟ್ರೀಯ ಕ್ಯಾನ್ಸರ್ ದಿನದ ಸಂದರ್ಭದಲ್ಲಿ, ನಾನು ನಿಜವಾಗಿಯೂ ವಿಶೇಷವಾದದ್ದನ್ನು ಹಂಚಿಕೊಳ್ಳಲು ಬಯಸುತ್ತೇನೆ. ಕ್ಯಾನ್ಸರ್ ಪೀಡಿತರಿಗೆ ಅವಶ್ಯಕವಾದ ಉದ್ದದ ತಲೆ ಕೂದಲನ್ನು ದಾನ ಮಾಡಲು 2 ವರ್ಷಗಳಿಂದ ತಮ್ಮ ಮಗ ರಾಯನ್ ತಲೆ ಕೂದಲು ಕತ್ತರಿಸಿಲ್ಲ. ರಿಯಾನ್ ಈ ನಿರ್ಧಾರ ನಮಗೆ ಆಶ್ಚರ್ಯವನ್ನುಂಟು ಮಾಡಿದೆ. ಅಲ್ಲದೆ ಅತಿ ಹೆಚ್ಚು ಹೆಮ್ಮೆ ಉಂಟು ಮಾಡಿದೆ ಎಂದು ಮಾಧುರಿ ದೀಕ್ಷಿತ್ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ರಾಯನ್ ಈ ಕಾರ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.










