ಭೋಪಾಲ್(ಜಬಲ್ ಪುರ್) : ಶೂಟ್ ಮಾಡಿಕೊಂಡು ಕಾಂಗ್ರೆಸ್ ಎಂಎಲ್ಎ ಮಗ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಕಾಂಗ್ರೆಸ್ ಎಂಎಲ್ಎ ಸಂಜಯ್ ಯಾದವ್ ಮಗ ವೈಭವ್(16) ರಿವಾಲ್ವರ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಪಿಯುಸಿ ಓದುತ್ತಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತಲೆಗೆ ಗುಂಡು ಹಾರಿಸಿಕೊಂಡು ಗಂಭೀರ ಗಾಯಗೊಂಡಿದ್ದ ಅವನನ್ನು ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ವೈಭವ್ ಕೊನೆಯುಸಿರೆಳೆದಿದ್ದಾನೆ. ಆತ ವಾಷ್ ರೂಮ್ ನಲ್ಲಿ ಶೂಟ್ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ವೈಭವ್ ಬರೆದಿಟ್ಟ ಪತ್ರ ದೊರೆಕಿದ್ದು, ಅದರಲ್ಲಿ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದುಕೊಂಡಿದ್ದಾನೆ. ಈ ಪ್ರಕರಣವನ್ನು ಆತ್ಮಹತ್ಯೆ ಎಂದು ಖಚಿತಪಡಿಸಿದ್ದು, ಯಾವ ಕಾರಣಕ್ಕೆ ಎಂಬುದನ್ನು ವಿಚಾರಣೆ ಮಾಡುತ್ತಿದ್ದೇವೆ ಎಂದು ಜಬಲ್ ಪುರ್ ಎಸ್ ಪಿ ಸಿದ್ಧಾರ್ಥ್ ಬಹುಗುಣ ಹೇಳಿದ್ದಾರೆ.










