ನಾಯಿ ವಿಚಾರಕ್ಕೆ ಜಗಳ – ಯುವಕನ ಕೊಲೆಯಲ್ಲಿ ಅಂತ್ಯ…

87
firstsuddi

ಚಿತ್ರದುರ್ಗ : ನಾಯಿ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಜಾಲಿಕಟದಟೆ ಗ್ರಾಮದಲ್ಲಿ ನಡೆದಿದೆ.

ಸ್ವಾಮಿ ಎಂಬಾತ ತಮ್ಮ ಸಾಕು ನಾಯಿಯನ್ನು ಪ್ರತಿನಿತ್ಯ ಬಹಿರ್ದೆಸೆಗೆ ಕರೆದೊಯ್ಯತಿದ್ದರು. ನಿನ್ನೆ ಸಹ ಎಂದಿನಂತೆ ನಾಯಿಯನ್ನು ಬಹಿರ್ದೆಸೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ನಮ್ಮ ಮನೆ ಮುಂದೆ ಗಲೀಜು ಮಾಡಿಸಬೇಡಿ ಎಂದು ಮಹಾಂತೇಶ್ ಹೇಳಿದ್ದಾನೆ. ಈ ವಿಚಾರವಾಗಿ ಮಹಾಂತೇಶ್ ಹಾಗೂ ಸ್ವಾಮಿ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸ್ವಾಮಿ ಮರದ ತುಂಡಿನಿಂದ ಜಾಲಿಕಟ್ಟೆ ನಿವಾಸಿ ಮಹಂತೇಶ್ (23) ತಲೆಗೆ ಬಲವಾಗಿ ಹೊಡೆದಿದ್ದಾನೆ. ಹೀಗಾಗಿ ಗಂಭೀರವಾಗಿ ಗಾಯಗೊಂಡ ಮಹಂತೇಶ್ ಚಿಕಿತ್ಸೆ ಫಲಿಸದೇ ಜಿಲ್ಲಾಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

ಇನ್ನು ಮಹಾಂತೇಶ್ ಕುಟುಂಬಸ್ಥರು ಸ್ವಾಮಿ ಮತ್ತು ಆತನ ಪತ್ನಿ ಕಮಲಮ್ಮ ವಿರುದ್ಧ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ. ಕೊಲೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.