ಅಧಿಕಾರಿಗಳಷ್ಟೇ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ : ಅಧಿಕಾರಿಗಳಿಗೆ ಸಚಿವ ಆರ್.ಅಶೋಕ್ ಸೂಚನೆ…

85
firstsuddi

ಚಿಕ್ಕಮಗಳೂರು : ರಾಜಕಾರಣಿಗಳು, ಮಂತ್ರಿಗಳು, ಶಾಸಕರನ್ನ ಕರೆದುಕೊಂಡು ಹೋಗಬೇಡಿ. ಅಧಿಕಾರಿಗಳಷ್ಟೇ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ಕಂದಾಯ ಸಚಿವ ಆರ್. ಅಶೋಕ್ ಸೂಚನೆ ನೀಡಿದ್ದಾರೆ.

ಬೆಳಗಾವಿ, ಬಾಗಲಕೋಟೆ, ಹಾವೇರಿ, ಉತ್ತರಕನ್ನಡ, ಗದಗದಲ್ಲಿ ಭಾರೀ ಮಳೆಗೆ ಹೆಚ್ಚಿನ ಹಾನಿ ಸಂಭವಿಸಿದೆ. ಬೆಳಗಾವಿ 76 ಸಾವಿರ ರೈತರ ಬೆಳೆ ಹಾನಿ, ಬಾಗಲಕೋಟೆ 20 ಸಾವಿರ ರೈತರ ಬೆಳೆ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಹಣ ಬಿಡುಗಡೆ ಮಾಡಬೇಕಿತ್ತು, ಆ ಫೈಲ್ ನನ್ನ ಬಳಿ ಬಂದಿದೆ. ಇಂದು-ನಾಳೆಯಲ್ಲಿ ಹಣ ಬಿಡುಗಡೆ ಮಾಡುತ್ತೇವೆ. ಎಲ್ಲೆಲ್ಲಿ ಫ್ಲಡ್, ಬೆಳೆಹಾನಿಯಾಗಿದೆ ಅವರಿಗೆಲ್ಲಾ 100 ಪರ್ಸೆಂಟ್ ಪರಿಹಾರ ಕೊಡುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.