ಚಿಕ್ಕಮಗಳೂರು : ನಿತ್ಯ ಬದುಕಿನ ಭಾಗವಾದ ಸಂಬಾರ ಪದಾರ್ಥಗಳು : ಡಾ. ಜಾನ್ಸಿ ಮಣಿ ತೊಟಂ.

91
firstsuddi

ಚಿಕ್ಕಮಗಳೂರು : ದಿನನಿತ್ಯದ ಬದುಕಿನಲ್ಲಿ ಸಂಬಾರ ಪದಾರ್ಥಗಳ ಬಳಕೆ ಸಾಮಾನ್ಯವಾಗಿದ್ದು ಅಡುಗೆಯ ಜೊತೆಗೆ ಔಷಧಿಯಾಗಿಯೂ ಕೂಡ ಬಳಕೆಯಲ್ಲಿದೆ ಎಂದು ಸಂಬಾರ ಮಂಡಳಿಯ ಉಪ ನಿರ್ದೇಶಕರಾದ ಡಾ. ಜಾನ್ಸಿ ಮಣಿ ತೊಟಂ ಹೇಳಿದರು.

ತೊಗರಿಹಂಕಲ್‍ನ ಸರ್ಕಾರಿ ಫ್ರೌಡಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ಆಜಾದ್ ಮಹೋತ್ಸವದ ಪ್ರಯುಕ್ತ ಕಷಾಯಪುಡಿಗಳ ಪ್ಯಾಕೆಟ್‍ಗಳನ್ನು ವಿತರಿಸಿ ಮಾತನಾಡಿದರು.

ಆಜಾದ್ ಮಹೋತ್ಸವದ ಅಂಗವಾಗಿ 75 ಸಾವಿರ ಕಷಾಯಪುಡಿಗಳ ಪ್ಯಾಕೇಟನ್ನು ವಿತರಿಸುವ ಗುರಿ ಹೊಂದಲಾಗಿದೆ. ತಲೆನೋವು, ಥಂಡಿ, ಕೆಮ್ಮು, ಹೊಟ್ಟೆನೋವು ಹೀಗೆ ಅನೇಕ ಕಾಯಿಲೆಗಳಿಗೆ ಸಂಬಾರ ಪದಾರ್ಥಗಳು ಮನೆಮದ್ದಾಗಿ ಬಳಕೆಯಲ್ಲಿವೆ ಎಂದರು.

ಶಾಲಾ ಮುಖ್ಯಶಿಕ್ಷಕಿಯಾದ ವಿ.ಎಸ್ ರೂಪ ಮಾತನಾಡಿ, ಮಕ್ಕಳ ದಿನಾಚರಣೆಯ ಆಚರಣೆಯ ಮೂಲಕ ಜವಾಹರಲಾಲ್ ನೆಹರು ಅವರನ್ನು ಸ್ಮರಿಸುವ ಅಗತ್ಯವಿದೆ. ದೇಶದ ಮಕ್ಕಳಿಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕೆಂಬುದು ನೆಹರು ಅವರ ಧ್ಯೇಯವಾಗಿತ್ತು ಎಂದರು.

ಈ ಸಂದರ್ಭದಲ್ಲಿ ಆಟೋಟ ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಹ ಶಿಕ್ಷಕರಾದ ಎಸ್.ಟಿ ಸುನೀತಾ, ಮಲ್ಲೇಗೌಡ, ದೈಹಿಕ ಶಿಕ್ಷಕರಾದ ದಕ್ಷಿಣಮೂರ್ತಿ ಹಾಗೂ ವಿದ್ಯಾರ್ಥಿಗಳು ಇದ್ದರು.