ಬೆಂಗಳೂರಿನ ಹಲವೆಡೆ ಭೂಕಂಪನದ ಅನುಭವ – ಭಯಭೀತರಾದ ಜನ…

65
firstsuddi

ಬೆಂಗಳೂರು : ಬೆಂಗಳೂರಿನ ಹಲವಡೆ ಭೂಮಿ ಕಂಪಿಸಿದ ಅನುಭವ ಆಗಿದ್ದು, ಜನರು ಭಯಭೀತರಾಗಿದ್ದರು. ಇಂದು ಬೆಳಗ್ಗೆ 11-50ರಿಂದ 12-15ರ ಸಮಯದಲ್ಲಿ 2 ಭಾರೀ ನಗರದ ಆರ್.ಆರ್ ನಗರ, ನಾಗರಭಾವಿ, ಕೆಂಗೇರಿ, ಯಶವಂತಪುರ, ಕಗ್ಗಲಿಪುರ, ಹೆಮ್ಮಿಗೆಪುರ, ಜ್ಞಾನಭಾರತಿ, ಸೇರಿದಂತೆ ಹಲವೆಡೆ ದೊಡ್ಡ ಶಬ್ಧ ಕೇಳಿ ಬಂದಿದೆ.

ಮಂಡ್ಯದಲ್ಲಿಯೂ ಭಾರೀ ಶಬ್ದ ಕೇಳಿ ಬಂದಿದ್ದು, ಜನರು ಬೆಚ್ಚಿಬಿದ್ದಿದ್ದಾರೆ. 11.50ರ ಸುಮಾರಿಗೆ ಜೋರು ಶಬ್ದ ಕೇಳಿ ಬಂದಿದೆ. ಶಬ್ಧಕ್ಕೆ ಮನೆ, ಕಚೇರಿ ಕಟ್ಟಡಗಳ ಕಿಟಕಿಗಳು, ವಸ್ತುಗಳು ನಲುಗಿವೆ. ಈ ಹಿಂದೆ ಕೆಆರ್ಎಸ್, ಪಾಂಡವಪುರ, ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಶಬ್ಧ ಕೇಳಿಬಂದಿತ್ತು. ಇದೀಗ ಮಂಡ್ಯ ನಗರದಲ್ಲಿ ಭಾರೀ ಶಬ್ದ ಕೇಳಿ ಬಂದಿದೆ.

ಈ ಬಗ್ಗೆ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಸ್ಪಷ್ಟನೆ ನೀಡಿದ್ದು, ಬೆಂಗಳೂರಿನ ಹಲವೆಡೆ 2021ರ ನವೆಂಬರ್ 26ರಂದು ಬೆಳಗ್ಗೆ 11.50 ರಿಂದ 12.15ರವರೆಗೆ ಯಾವುದೇ ಭೂಕಂಪನ ಸಂಭವಿಸಿಲ್ಲ. ಈ ಅವಧಿಯಲ್ಲಿ ಉಂಟಾಗಿರುವುದು ನಿಗೂಢ ಶಬ್ದವಷ್ಟೇ. ಭೂಕಂಪ ಮಾಪನ ಸಿಸ್ಮೋಗ್ರಾಫ್ ನಲ್ಲಿ ಭೂಕಂಪನವಾದ ಮಾಹಿತಿ ಇಲ್ಲದಿರುವುದರಿಂದ ಭೂಕಂಪನ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ.