ಆಂಧ್ರಪ್ರದೇಶದ ಮಾಜಿ ಸಿಎಂ ಕೊನಿಜೇಟಿ ರೋಸಯ್ಯ ನಿಧನ…

92
firstsuddi

ಹೈದರಾಬಾದ್ : ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಕೊನಿಜೇಟಿ ರೋಸಯ್ಯ (88)ಅವರು ಹೈದರಾಬಾದ್ ನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ. ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿದ್ದ ರೋಸಯ್ಯ ಅವರು ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

1933 ಜುಲೈ 4ರಂದು ಆಂಧ್ರದ ಗುಂಟೂರು ಜಿಲ್ಲೆಯ ವೇಮೂರಿನಲ್ಲಿ ಜನಿಸಿದ ರೋಸಯ್ಯ ಅವರು ಗುಂಟೂರಿನ ಹಿಂದೂ ಕಾಲೇಜಿನಲ್ಲಿ ಕಾಮರ್ಸ್ ಪದವೀಧರರಾಗಿದ್ದರು. 1968ರಲ್ಲಿ ರೋಸಯ್ಯ ಕಾಂಗ್ರೆಸ್ ಪಕ್ಷದಿಂದ ಮೊದಲು ಪರಿಷತ್ಗೆ ಆಯ್ಕೆಯಾದ ಅವರು, 1974 ಮತ್ತು 1980ರಲ್ಲಿಯೂ ಪರಿಷತ್ಗೆ ಆಯ್ಕೆಯಾಗಿದ್ದರು.

ಸೆಪ್ಟೆಂಬರ್ 3, 2009ರಿಂದ ನವೆಂಬರ್ 24, 2010 ರವರೆಗೆ ಅವಿಭಜಿತ ಆಂಧ್ರಪ್ರದೇಶಕ್ಕೆ ಸಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಇದರ ಜೊತೆಗೆ 2011ರಿಂದ, 2016ರವರೆಗೆ ತಮಿಳುನಾಡಿಗೆ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.ಅಲ್ಲದೇ 28 ಜೂನ್, 2014ರಿಂದ 31 ಆಗಸ್ಟ್, 2014ರವರೆಗೂ ಕರ್ನಾಟಕಕ್ಕೆ ಹೆಚ್ಚುವರಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಆಂಧ್ರ ವಿಶ್ವವಿದ್ಯಾನಿಲಯವು 2007ರಲ್ಲಿ ಕೊನಿಜೇಟಿ ರೋಸಯ್ಯ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದೆ.