ನಟಿಯರು ತಮಗಿಂತಲೂ ಕಿರಿಯ ವಯಸ್ಸಿನ ವ್ಯಕ್ತಿಗಳನ್ನು ವಿವಾಹವಾಗುತ್ತಿರುವುದು ಶ್ಲಾಘನೀಯ : ಕಂಗನಾ.

79
firstsuddi

ನವದೆಹಲಿ : ಬಾಲಿವುಡ್ ನ ಕೆಲವು ನಟಿಯರು ತಮಗಿಂತ ಕಿರಿಯ ವಯಸ್ಸಿನವರನ್ನು ವಿವಾಹವಾಗುತ್ತಿರುವುದು ಶ್ಲಾಘನೀಯ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

ಬಾಲಿವುಡ್ ನ ಕೆಲವು ನಟಿಯರು ತಮಗಿಂತ ಕಿರಿಯ ವಯಸ್ಸಿನವರನ್ನು ವರಿಸಿದ್ದಾರೆ. ಅಂತೆಯೇ ಕತ್ರಿನಾ ಕೈಫ್ ಕೂಡ ತನಗಿಂತ ಐದು ವರ್ಷ ಕಿರಿಯ ವಯಸ್ಸಿನ ವಿಕ್ಕಿ ಕೌಶಲ್ರನ್ನು ವಿವಾಹವಾಗುತ್ತಿದ್ದಾರೆ. ಈ ವಿಚಾರವನ್ನು ಮುಖ್ಯವಾಗಿಸಿಕೊಂಡು ಕತ್ರಿನಾ ನಡೆಯನ್ನು ಕಂಗನಾ ರಣಾವತ್ ಶ್ಲಾಘಿಸಿದ್ದಾರೆ.

ಈ ಕುರಿತು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ವೊಂದನ್ನು ಹಾಕಿರುವ ಕಂಗನಾ ರಣಾವತ್, ಯಶಸ್ವಿ ಪುರುಷರು ವಯಸ್ಸಿನಲ್ಲಿ ತಮಗಿಂತ ತುಂಬ ಕಿರಿಯರಾದ ಮಹಿಳೆಯರ ಜತೆ ಮದುವೆ ಆದ ಕಥೆಗಳನ್ನು ಕೇಳುತ್ತ ನಾವು ಬೆಳೆದೆವು. ಗಂಡನಿಗಿಂತ ಹೆಂಡತಿಯೇ ಹೆಚ್ಚು ಸಾಧನೆ ಮಾಡಿದರೆ ಅದನ್ನು ಮಹಿಳೆಯರ ಪಾಲಿಗೆ ಒಂದು ಬಿಕ್ಕಟ್ಟಿನ ರೀತಿ ನೋಡಲಾಗುತ್ತಿತ್ತು. ಚಿಕ್ಕ ವಯಸ್ಸಿನ ಹುಡುಗರನ್ನು ಮದುವೆ ಮಾಡಿಕೊಳ್ಳುವುದು ಹಾಗಿರಲಿ, ಒಂದು ವಯಸ್ಸು ದಾಟಿದ ನಂತರ ಮಹಿಳೆಯರು ಮದುವೆ ಆಗುವುದೇ ಅಸಾಧ್ಯವಾಗಿತ್ತು. ಆದರೆ ಈಗ ಶ್ರೀಮಂತ ಮಹಿಳೆಯರು, ಯಶಸ್ವಿ ನಟಿಯರು ಆ ಎಲ್ಲ ಹಳೆಯ ನಿಯಮಗಳನ್ನು ಮುರಿಯುತ್ತಿರುವುದು ನೋಡಲು ಖುಷಿ ಆಗುತ್ತದೆ. ಸಿನಿಮಾ ಕ್ಷೇತ್ರದಲ್ಲಿ ಆ ಒಂದು ಬದಲಾವಣೆಯಾಗಿದೆ ಎಂದು ಬರೆದುಕೊಂಡಿದ್ದಾರೆ.