ಚಾಮರಾಜನಗರ : ಭಾರಿ ಶಬ್ದಕ್ಕೆ ಬೆಚ್ಚಿ ಬಿದ್ದ ಜನತೆ – 10ಕ್ಕೂ ಹೆಚ್ಚು ಮನೆಗಳಿಗೆ ಹಾನಿ…

51
firstsuddi

ಚಾಮರಾಜನಗರ : ನಿನ್ನೆ ತಡ ರಾತ್ರಿ ಕೇಳಿಬಂದ ಭಾರಿ ಶಬ್ದದಿಂದ ಸುಮಾರು 10 ರಿಂದ 11 ಮನೆಗಳಿಗೆ ಹಾನಿಯಾಗಿರುವ ಘಟನೆ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸಿಂಗಲ್ಲನೂರು ಗ್ರಾಮದಲ್ಲಿ ನಡೆದಿದೆ.

ನಿನ್ನೆ ಮಧ್ಯರಾತ್ರಿ 2.30ರ ಸುಮಾರಿಗೆ ಕೇಳಿ ಬಂದ ಭಾರಿ ಶಬ್ದ ಜನರ ನಿದ್ದೆಗೆಡಿಸಿದೆ. ಪರಿಣಾಮ ನಿದ್ದೆಯಲ್ಲಿದ್ದ ಜನರೆಲ್ಲರೂ ಮನೆಯಿಂದ ಓಡಿ ಹೊರ ಬಂದಿದ್ದಾರೆ. ಮಹದೇವಮ್ಮ, ಸಿದ್ದರಾಜು, ಸೋಮಣ್ಣ, ಶೈಲಪ್ಪ, ಸುರೇಶ್ ಸೇರಿದಂತೆ ಹಲವರ ಮನೆಗಳು ಹಾನಿಗೊಳಗಾಗಿವೆ. ಈ ಪೈಕಿ ಸಿದ್ದರಾಜು ಎಂಬುವರ ಮನೆಯು ಸಂಪೂರ್ಣ ಜಖಂಗೊಂಡಿದ್ದು, ಸಿದ್ದರಾಜು ಮನೆಯಲ್ಲಿ ವಾಸವಿದ್ದ ರತ್ಮಮ್ಮ ಎಂಬುವರಿಗೆ ಕೈಗೆ ಪೆಟ್ಟಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಆರ್.ನರೇಂದ್ರ ಅವರು ಅವಘಡಕ್ಕೆ ಕಾರಣ ಏನು ಎಂಬುದರ ವರದಿಯನ್ನು ತ್ವರಿತವಾಗಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹಾನಿಗೊಳಗಾದ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ಇನ್ನೂ ತಹಶೀಲ್ದಾರ್ ಕುನಾಲ್, ಇಒ ಮಹೇಶ್, ಡಿವೈಎಸ್ಪಿ ಜಿ.ನಾಗರಾಜು ಅವರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿದ್ದಾರೆ.