ಹೈದರಾಬಾದ್ : ತೆಲಂಗಾಣದ ಮಹಾಕಾಳಿ ದೇವಸ್ಥಾನದಲ್ಲಿರುವ ಮಹಾಕಾಳಿ ದೇವಿ ಮೂರ್ತಿಯ ಪಾದದ ಕೆಳಗೆ ವ್ಯಕ್ತಿಯೊಬ್ಬನ ರುಂಡ ಪತ್ತೆಯಾಗಿದೆ.
ನಿನ್ನೆ ಕಾಳಿ ದೇವಿ ವಿಗ್ರಹದ ಪಾದದ ಕೆಳಗೆ ವ್ಯಕ್ತಿಯೊಬ್ಬನ ತಲೆ ಬುರುಡೆಯನ್ನು ಮೊದಲು ಅರ್ಚಕರು ನೋಡಿದ್ದಾರೆ. ನಂತರ ಈ ಕುರಿತು ಅರ್ಚಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿಎಸ್ಪಿ ಆನಂದ್ ರೆಡ್ಡಿ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತನನ್ನು ಗುರುತಿಸುವ ಸಲುವಾಗಿ ತಲೆಯ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿದೆ.
ಈ ಕುರಿತು ಮಾತನಾಡಿದ ದೇವರಕೊಂಡದ ಉಪ ಪೊಲೀಸ್ ವರಿಷ್ಠಾಧಿಕಾರಿ ಆನಂದರೆಡ್ಡಿ, ಸುಮಾರು 30ರ ಆಸುಪಾಸಿನ ವ್ಯಕ್ತಿಯನ್ನು ಬೇರೆಡೆ ಹತ್ಯೆಗೈದು ತಲೆಯನ್ನು ವಿಗ್ರಹದ ಪಾದದ ಕೆಳಗೆ ಹಿಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ನಿಧಿಗಾಗಿ ನಡೆಸುವ ನರ ಬಲಿ ಪ್ರಕರಣವಾಗಿರಬಹುದು ಎಂಬ ವದಂತಿಗಳು ಹರಡುತ್ತಿವೆ. ಈ ಕುರಿತು ಎಲ್ಲ ಆಯಾಮಗಳಲ್ಲಿ ನಾವು ತನಿಖೆ ಮಾಡುತ್ತೇವೆ. ಈ ಕೃತ್ಯವನ್ನು ಭೇದಿಸಲು 8 ತಂಡವನ್ನು ರಚಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಒಟ್ಟಾರೆ ಇದು ಕೊಲೆಯೋ ಅಥವಾ ನರಬಲಿಯೋ ಎಂಬುದು ತನಿಖೆಯ ಬಳಿಕ ಖಚಿತವಾಗಲಿದೆ.










