ಮೂರು ಕಣ್ಣು, ನಾಲ್ಕು ಮೂಗಿನ ರಂಧ್ರ ಹೊಂದಿರುವ ಕರು ಜನನ – ನೋಡಲು ಮುಗಿಬಿದ್ದ ಜನ…

81
firstsuddi

ರಾಯ್ಪುರ : ಛತ್ತೀಸ್ ಗಢದ ರಾಜನಂದಗಾಂವ್ ಜಿಲ್ಲೆಯಲ್ಲಿ ಮೂರು ಕಣ್ಣು ಮತ್ತು ನಾಲ್ಕು ಮೂಗಿನ ರಂಧ್ರ ಹೊಂದಿರುವ ವಿಚಿತ್ರ ಕರು ಜನಿಸಿದ್ದು, ಕರುವನ್ನು ನೋಡಲು ಜನರು ಮುಗಿಬಿದ್ದಿದ್ದಾರೆ.

ಅಲ್ಲದೇ ಈ ಅಪರೂಪದ ಕರುವನ್ನು ನೋಡಲು ದೂರದ ಊರುಗಳಿಂದ ಜನ ಜಮಾಯಿಸುತ್ತಿದ್ದು, ಕರುವಿಗೆ ಅಗರಬತ್ತಿ, ಹೂ, ತೆಂಗಿನಕಾಯಿ, ಕಾಣಿಕೆ ರೂಪದಲ್ಲಿ ಹಣವನ್ನು ಅರ್ಪಿಸಿ ಮಹಾದೇವನ ರೂಪವೆಂದು ಪೂಜಿಸುತ್ತಿದ್ದಾರೆ. ಮತ್ತೊಂದೆಡೆ ಪಶು ವೈದ್ಯರು ಇದು ಯಾವುದೇ ರೀತಿಯ ಪವಾಡ ಅಲ್ಲ. ಹಸುವಿನ ಹೊಟ್ಟೆಯಲ್ಲಿ ಭ್ರೂಣವು ಸರಿಯಾಗಿ ಬೆಳವಣಿಗೆಯಾಗದ ಕಾರಣ ಈ ರೀತಿ ಕರು ಹುಟ್ಟಿದೆ ಎಂದು ಹೇಳುತ್ತಿದ್ದಾರೆ.

ರೈತ ಹೆಮಂತ್ ಚಂದೇಲ್ ಅವರು ಕೃಷಿ ಕೆಲಸದ ಜೊತೆಗೆ ಹಸು ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದು, ಜರ್ಸಿ ಹಸುವನ್ನು ಸಾಕಿದ್ದಾರೆ. ಮಕರ ಸಂಕ್ರಾಂತಿಯ ದಿನ ಸಂಜೆ 7 ಗಂಟೆ ಸುಮಾರಿಗೆ ಹಸು ಕರುವಿಗೆ ಜನ್ಮ ನೀಡಿದೆ. ಈ ಕರುವಿಗೆ ಮೂರು ಕಣ್ಣುಗಳಿದ್ದು, ಒಂದು ಕಣ್ಣು ತಲೆಯ ಮಧ್ಯಭಾಗದಲ್ಲಿದೆ. ಅದರ ಮೂಗಿನಲ್ಲಿ ಎರಡರ ಬದಲು ನಾಲ್ಕು ರಂಧ್ರಗಳಿವೆ. ಅಲ್ಲದೆ ಇದರ ಬಾಲವು ಕೂದಲು ರಹಿತವಾಗಿದೆ.