ನಾಪತ್ತೆಯಾಗಿದ್ದ ನಟಿ ಶವವಾಗಿ ಪತ್ತೆ – ತಾನೇ ಕೊಂದಿರುವುದಾಗಿ ತಪ್ಪೊಪ್ಪಿಕೊಂಡ ಪತಿ.

85
firstsuddi

ಬಾಂಗ್ಲಾದೇಶ (ಢಾಕಾ): ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಬಾಂಗ್ಲಾದೇಶದ ನಟಿ ರೈಮಾ ಇಸ್ಲಾಂ ಶಿಮು (45) ಅವರು ಢಾಕಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಮಾ ಇಸ್ಲಾಂ ಶಿಮು ಅವರ ಪತಿ ಶೇಖಾವತ್ ಅಲಿ ನೊಬೆಲ್ ಮತ್ತು ಹಾಗೂ ಕಾರು ಚಾಲಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಪೊಲೀಸ್ ವಿಚಾರಣೆ ವೇಳೆ ನೊಬೆಲ್ ತಾನೇ ತನ್ನ ಹೆಂಡತಿ ರೈಮಾಳನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ನಟಿ ರೈಮಾ ನಾಪತ್ತೆಯಾದ ಹಿನ್ನೆಲೆ ಅವರ ಕುಟುಂಬಸ್ಥರು ಭಾನುವಾರ ಕಲಬಾಗನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪೊಲೀಸರು ತನಿಖೆ ಸಹ ಕೈಗೊಂಡಿದ್ದರು. ಆದರೆ, ಸೋಮವಾರ ಕೆರಣಿಗಂಜ್ನ ಹಜರತ್ಪುರ ಸೇತುವೆಯ ಬಳಿ ಗೋಣಿ ಚೀಲವೊಂದರಲ್ಲಿ ಶವ ಪತ್ತೆಯಾಗಿದೆ. ಮೃತದೇಹವನ್ನು ವಶಪಡಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸರ್ ಸಲೀಮುಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಆಕೆಯ ಕೊಲೆಯ ಹಿಂದಿನ ಕಾರಣ ಇನ್ನೂ ತಿಳಿದುಬಂದಿಲ್ಲ.

ನಟಿ 1998ರಲ್ಲಿ ಬರ್ತಮನ್ ಅವರ ನಟನೆಗೆ ಪದಾರ್ಪಣೆ ಮಾಡಿದ್ದರು. ರೈಮಾ 25ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು. ಆಕೆ ಬಾಂಗ್ಲಾದೇಶದ ಚಲನಚಿತ್ರೋದ್ಯಮದಲ್ಲಿ ಜನಪ್ರಿಯರಾಗಿದ್ದರು. ಅವರು ಬಾಂಗ್ಲಾದೇಶ ಚಲನಚಿತ್ರ ಕಲಾವಿದರ ಸಂಘದ ಸಹ ಸದಸ್ಯರಾಗಿದ್ದರು.