ನವದೆಹಲಿ : ಕೋವಿನ್ ಪೋರ್ಟಲ್ ನಿಂದ ಬಳಕೆದಾರರ ಖಾಸಗಿ ಮಾಹಿತಿ ಸೋರಿಕೆ ಆಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ.
20,000ಕ್ಕೂ ಅಧಿಕ ಭಾರತೀಯರ ಕೊರೊನಾ ಸಂಬಂಧಿತ ಖಾಸಗಿ ಮಾಹಿತಿ ಆನ್ ಲೈನ್ ನಲ್ಲಿ ಸೋರಿಕೆಯಾಗಿದ್ದು, ಕೆಲ ಜಾಲತಾಣಗಳಲ್ಲಿ ಈ ದಾಖಲೆಗಳ ಹೆಸರು, ಫೋನ್ ನಂಬರ್, ಕೊರೊನಾ ಪರೀಕ್ಷಾ ಫಲಿತಾಂಶ ಮತ್ತಿತರ ಮಾಹಿತಿ ಮಾರಾಟಕ್ಕೆ ಇಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನಲೆ ಭಾರತೀಯರ ಖಾಸಗಿ ಮಾಹಿತಿ ಸೋರಿಕೆ ಕುರಿತಾದ ವರದಿಗಳು ಸುಳ್ಳು ಎಂದಿರುವ ಆರೋಗ್ಯ ಸಚಿವಾಲಯ ಕೋವಿನ್ ಪೋರ್ಟಲ್ ನಲ್ಲಿ ಭಾರತೀಯರ ವಿಳಾಸ ಮತ್ತು ಕೊರೊನಾ ಪರೀಕ್ಷಾ ಫಲಿತಾಂಶ ಮಾಹಿತಿ ಸಂಗ್ರಹಿಸುವುದಿಲ್ಲ ಎಂದು ತಿಳಿಸಿದೆ.










