ಐದು ಎಕರೆ ಕಾಫಿ, ಅಡಿಕೆ ತೋಟ ಸಂಪೂರ್ಣ ಬೆಂಕಿಗಾಹುತಿ…

136
firstsuddi
ಚಿಕ್ಕಮಗಳೂರು :ವಿದ್ಯುತ್ ತಂತಿ ತಗುಲಿ ಸುಮಾರು ಎರಡು ಎಕರೆ ಕಾಫಿ ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿರೋ ಘಟನೆ  ತಾಲೂಕಿನ ಇಂದಾವರ ಗ್ರಾಮದಲ್ಲಿ  ನಡೆದಿದೆ. ಐ. ಎಸ್.ಪ್ರಸನ್ನ ಎಂಬುವರಿಗೆ ಸೇರಿದ  ಎರಡು  ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಕಾಫಿತೋಟದಲ್ಲಿದ್ದ ಮೆಣಸಿನ ಬಳ್ಳಿಗಳು ಕೂಡ ಸಂಪೂರ್ಣ ಸುಟ್ಟು ಕರಕಲಾಗಿದು ಇನ್ನು  ಮೂಡಿಗೆರೆ ಸಮೀಪ ಆಕಸ್ಮಿಕ ಬೆಂಕಿ ತಗುಲಿ  ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿರೋ ಘಟನೆ 
 ತಾಲೂಕಿನ ಬೆಟ್ಟಗೆರೆ ಗ್ರಾಮದಲ್ಲಿ ನಡೆದಿದೆ. ರಿತೀಶ್ ಗೌಡ ಎಂಬುವರಿಗೆ ಸೇರಿದ ಮೂರು  ಎಕರೆ ಕಾಫಿ ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕಾಫಿತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಬೆಳೆ ಸಂಪೂರ್ಣ ಬೆಂಕಿಯಲ್ಲಿ ಸುಟ್ಟು ಹೋಗಿದೆ. ದಶಕಗಳಿಂದ ಮಕ್ಕಳಂತೆ ಸಾಕಿದ್ದ ತೋಟದ ಸ್ಥಿತಿ ಕಂಡು ತೋಟದ ಮಾಲೀಕ ಕಣ್ಣೀರಿಟ್ಟಿದ್ದಾರೆ. ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ತೋಟದಲ್ಲಿದ್ದ ಲಕ್ಷಾಂತರ ಮೌಲ್ಯದ ಪೈಪ್‍ಗಳು ಕೂಡ ಬೆಂಕಿಯ ಕೆನ್ನಾಲಿಗೆಯಲ್ಲಿ ಸಟ್ಟು ಕರಕಲಾಗಿವೆ.
ಎರಡ್ಮೂರು ವರ್ಷಗಳಿಂದ ಅತಿವೃಷ್ಠಿಯಿಂದ ನಮ್ಮ ಬದುಕು ಬೀದಿಗೆ ಬಂದಿತ್ತು. ಆದರೀಗ, ಇಡೀ ತೋಟವೇ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಭವಿಷ್ಯವೇ ಕತ್ತಲಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡದಿದ್ದರೆ ಮಳೆಯಿಂದ ಅಳಿದುಳಿದ ಬದುಕು ಸಂಪೂರ್ಣ ಬೀದಿಗೆ ಬೀಳಿದೆ ಎಂದು ತೋಟದ ಮಾಲೀಕರು ಅತಂತ್ರಕ್ಕೀಡಾಗಿದ್ದಾರೆ