ವಿವಾದಾತ್ಮಕ ಹೇಳಿಕೆ ನೀಡಿದ ಶ್ವೇತಾ ತಿವಾರಿ – ತನಿಖೆಗೆ ಸೂಚನೆ…

94
firstsuddi

ಭೋಪಾಲ್ : ಜನಪ್ರಿಯ ಕಿರುತೆರೆ ನಟಿ ಶ್ವೇತಾ ತಿವಾರಿ “ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ” ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಬಗ್ಗೆ ತನಿಖೆ ನಡೆಸಲು ಭೋಪಾಲ್ ಪೊಲೀಸ್ ಕಮಿಷನರ್ ಗೆ ಮಧ್ಯಪ್ರದೇಶದ ಗೃಹ ಸಚಿವರು ಸೂಚನೆ ನೀಡಿದ್ದಾರೆ.

ಮಹಾಭಾರತ ಧಾರಾವಾಹಿಯಲ್ಲಿ ಭಗವಾನ್ ಕೃಷ್ಣ ಖ್ಯಾತಿಯ ಸೌರಭ್ ರಾಜ್ ಜೈನ್ ಜೊತೆ ಫ್ಯಾಷನ್ ಸಂಬಂಧಿತ ವೆಬ್ ಸರಣಿಯಲ್ಲಿ ಶ್ವೇತಾ ತಿವಾರಿ ನಟಿಸಿದ್ದಾರೆ. ಈ ವೆಬ್ ಸೀರಿಸ್ ಪ್ರಮೋಷನ್ ಇತ್ತೀಚೆಗೆ ಭೋಪಾಲ್ ನಲ್ಲಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ವೇತಾ, ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ಳುತ್ತಿದ್ದಾನೆ ಎಂದು ಮಾತಿನ ಭರದಲ್ಲಿ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅನೇಕರು ದೇವರ ಬಗ್ಗೆ ತಮಾಷೆಯಾಗಿ ಮಾತನಾಡಿದ್ದಕ್ಕೆ ಕಿಡಿಕಾರಿದ್ದಾರೆ.

ಇದನ್ನು ತೀವ್ರವಾಗಿ ಖಂಡಿಸಿರುವ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ, ಈ ಬಗ್ಗೆ ತನಿಖೆ ನಡೆಸಿ ವರದಿಯನ್ನು ನನಗೆ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.