ಅಪ್ಪು ಅಗಲಿ ಇಂದಿಗೆ ಮೂರು ತಿಂಗಳು – ಅಭಿಮಾನಿಗಳಿಗೆ ಅಶ್ವಿನಿಯಿಂದ 500 ಸಸಿಗಳ ವಿತರಣೆ…

89
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಪುನೀತ್ ರಾಜ್ ಕುಮಾರ್ ಅವರು ಅಗಲಿ ಇಂದಿಗೆ ಮೂರು ತಿಂಗಳುಗಳು ಕಳೆದಿವೆ. ಇಂದು ಕುಟುಂಬಸ್ಥರು ಸಮಾಧಿಗೆ ಭೇಟಿ ನೀಡಿ ತಿಂಗಳ ಪೂಜೆ ಮಾಡಿ ಅಪ್ಪುಗೆ ಎಡೆ ಇಟ್ಟಿದ್ದಾರೆ. ಬಳಿಕ ಅಪ್ಪು ನೆನಪಿಗಾಗಿ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸೀಬೆ, ಮಾವು, ತೇಗ, ಹಲಸಿನ ಗಿಡ ಸೇರಿ 500 ಸಸಿಗಳನ್ನು ಅಭಿಮಾನಿಗಳಿಗೆ ವಿತರಿಸಿದ್ದಾರೆ.

ರಾಘಣ್ಣ, ಪುನೀತ್ ಸಹೋದರಿ ಲಕ್ಷ್ಮೀ, ಅಶ್ವಿನಿ ಪುನೀತ್ ರಾಜ್ ಕುಮಾರ್, ಪುತ್ರಿಯರು ಹಾಗೂ ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಿದ್ದರು. ಕುಟುಂಬಸ್ಥರು ಪೂಜೆ ನೆರವೇರಿಸಿದ ಬಳಿಕ ಎಂದಿನಂತೆ ಅಭಿಮಾನಿಗಳಿಗೆ ದರ್ಶನ ವ್ಯವಸ್ಥೆ ಇರಲಿದೆ.