ಅಪ್ಪು ಸಮಾಧಿಗೆ ನಮನ ಸಲ್ಲಿಸಿದ ಶಕ್ತಿಧಾಮದ ಮಕ್ಕಳು…

94
firstsuddi

ಬೆಂಗಳೂರು : ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್ ಕುಮಾರ್ ಸಮಾಧಿಗೆ ಶಕ್ತಿ ಧಾಮದ ಮಕ್ಕಳು ನಮನ ಸಲ್ಲಿಸಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರು ಅಗಲಿ ಮೂರು ತಿಂಗಳ ಬಳಿಕ ಶಕ್ತಿಧಾಮದ ಮಕ್ಕಳು ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಸಮಾಧಿ ಮುಂದೆ ಕಣ್ಣೀರಿಟ್ಟ ಮಕ್ಕಳು, ಶಕ್ತಿಧಾಮದ ಹೆಸರು ಎಷ್ಟು ಸುಂದರ ಎಂಬ ಹಾಡನ್ನು ಹಾಡಿದ್ದಾರೆ. ನಟ ಶಿವರಾಜ್ ಕುಮಾರ್ ಅವರು ಶಕ್ತಿಧಾಮದ ಮಕ್ಕಳಿಗೆ ಪ್ರಪಂಚ ಜ್ಞಾನ ನೀಡುವ ಸಲುವಾಗಿ ಹಲವು ಕಡೆ ಪ್ರವಾಸ ಕೈಗೊಂಡಿದ್ದಾರೆ.