ಮುಂಬೈ : ಬಾಲಿವುಡ್ ಸಿನಿಮಾ ನಿರ್ಮಾಪಕ, ನಿರ್ದೇಶಕ ಮತ್ತು ರವೀನಾ ಟಂಡನ್ ಅವರ ತಂದೆ ರವಿ ಟಂಡನ್(86) ಇಂದು ನಿಧನರಾಗಿದ್ದಾರೆ. ಈ ಕುರಿತು ರವೀನಾ ಟಂಡನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ಅವರ ಅಭಿಮಾನಿಗಳು, ನಟ- ನಟಿಯರು ಸಂತಾಪ ಸೂಚಿಸಿದ್ದಾರೆ.
ನೀವು ಯಾವಾಗಲೂ ನನ್ನೊಂದಿಗೆ ನಡೆಯುತ್ತೀರಿ. ನಾನು ಯಾವಾಗಲೂ ನಿಮ್ಮೊಂದಿಗೆ ಇರುವೆ. ನಾನು ಎಂದಿಗೂ ನಿಮ್ಮನ್ನು ಬಿಡುವುದಿಲ್ಲ. ಲವ್ ಯು ಅಪ್ಪಾ ಎಂದು ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
ರವಿ ಟಂಡನ್ ಅವರು ಖೇಲ್ ಖೇಲ್ ಮೇ, ಅನ್ಹೋನಿ, ನಜ್ರಾನಾ, ಮಜ್ಬೂರ್, ಖುದ್-ದಾರ್ ಮತ್ತು ಜಿಂದಗಿ ಸಿನಿಮಾಗಳನ್ನು ನಿರ್ದೇಶಿಸಿದ್ದು, ಈ ಮೂಲಕ ಬಾಲಿವುಡ್ ನಲ್ಲಿ ತಮ್ಮದೇ ಛಾಪನ್ನು ಮೂಡಿಸಿದ್ದರು.










