ನವದೆಹಲಿ : ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ವಕೀಲರಿಂದ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ ನಡೆಸಿತು. ವಿಚಾರಣೆ ವೇಳೆ ಅಲ್ಲಿ ಸಿಲುಕಿರುವವರನ್ನು ನೋಡಿದರೆ ಪಾಪ ಎಂದೆನಿಸತ್ತದೆ. ಆದರೆ ಕೋರ್ಟ್ ಏನು ಮಾಡಲು ಸಾಧ್ಯ? ಯುದ್ಧವನ್ನು ನಿಲ್ಲಿಸಲು ನಾವು ರಷ್ಯಾ ಅಧ್ಯಕ್ಷರಿಗೆ ನಿರ್ದೇಶನ ನೀಡಬಹುದೇ? ಎಂದು ಪ್ರಶ್ನಿಸಿದೆ.
ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಮೇಲೆ ನಮಗೆ ಸಹಾನುಭೂತಿ ಇದೆ. ಅವರನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರ ತನ್ನ ಕೆಲಸವನ್ನು ಮಾಡುತ್ತಿದೆ. ನಾವು ಏನು ಮಾಡಬಹುದು ಎಂದು ಅಟಾರ್ನಿ ಜನರಲ್ ಅವರನ್ನು ಕೇಳಿದ್ದೇವೆ ಎಂದು ಸಿಜೆಐ ತಿಳಿಸಿದ್ದಾರೆ.










