ನಟಿ ಸಂಜನಾಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪ – ಯುವಕ ಪೊಲೀಸರ ವಶಕ್ಕೆ…

90
firstsuddi

ಮಡಿಕೇರಿ : ನಟಿ ಸಂಜನಾ ಗಲ್ರಾನಿಗೆ ಅವಾಚ್ಯ ಪದಗಳಿಂದ ನಿಂದನೆ ಮಾಡಿದ ಆರೋಪದಡಿ ಯುವಕನೋರ್ವನನ್ನು ಬೆಂಗಳೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಖ್ಯಾತ ಫ್ಯಾಷನ್ ಡಿಸೈನರ್, ಕೋರಿಯೋಗ್ರಾಫರ್ ಆಗಿರುವ ಪ್ರಸಾದ್ ಬಿದ್ದಪ್ಪ ಅವರ ಪುತ್ರ ಆ್ಯಡಂ ಬಿದ್ದಪ್ಪ ಈಗ ಪೊಲೀಸರ ವಶದಲ್ಲಿದ್ದಾರೆ. ಈತನನ್ನು ನಿನ್ನೆ ತಡರಾತ್ರಿ ಇಂದಿರಾನಗರ ಪೊಲೀಸರು ಮಡಿಕೇರಿಯಲ್ಲಿ ವಶಕ್ಕೆ ಪಡೆದಿದ್ದಾರೆ.

ಫೆಬ್ರವರಿ 25ರಂದು ಸಂಜನಾ ಗಲ್ರಾನಿ ಅವರಿಗೆ ಆ್ಯಡಂ ಬಿದ್ದಪ್ಪ ಅಶ್ಲೀಲ ಮೆಸೇಜ್ ಕಳುಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸಂಜನಾ ಇಂದಿರಾನಗರ ಠಾಣೆಗೆ ದೂರು ನೀಡಿದ್ರು. ಪ್ರಕರಣವನ್ನು ದಾಖಲಿಸಿಕೊಂಡಿದ್ದ ಇಂದಿರಾನಗರ ಪೊಲೀಸರು, ಬಿದ್ದಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಆ್ಯಡಂ ಬಿದ್ದಪ್ಪ ತನ್ನ ಮೊಬೈಲ್ ನಲ್ಲಿ ಇರುವ ಚಾಟಿಂಗ್ ಡಿಲೀಟ್ ಮಾಡಿರುವುದರಿಂದ ಅವರ ಮೊಬೈಲ್ ಅನ್ನು ಪೊಲೀಸರು ರಿಟ್ರೀವ್ ಗೆ ಕಳುಹಿಸಲಿದ್ದಾರೆ. ಇತ್ತ ಬಿದ್ದಪ್ಪ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.