ಬೀದರ್ : ಕುಡಿದ ಅಮಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ನಗರದ ಹೊರ ವಲಯದ ದೇವ ಉದ್ಯಾನವನದ ಬಳಿ ನಡೆದಿದೆ.
ನಗರದ ಬುತ್ತಿ ಬಸವಣ್ಣ ಕಾಲೋನಿಯ ನಿವಾಸಿಗಳಾದ ವಿದ್ಯಾಧರ್ (28) ಹಾಗೂ ಶಾಮ್ ರಾವ್ (30) ಮೃತ ದುರ್ದೈವಿಗಳು. ಇಬ್ಬರು ಯುವಕರು ಪಾರ್ಟಿ ಮಾಡಿ ತೆಲಂಗಾಣದಿಂದ ಬೀದರ್ ಗೆ ಬರುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿದ್ದು, ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಮತ್ತೊಬ್ಬರು ಬ್ರೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










