ಪಂಜಾಬ್ ಫಲಿತಾಂಶ – ಆಪ್‍ಗೆ ಮುನ್ನಡೆ, ಮಾಜಿ ಸಿಎಂಗಳಿಗೆ ಹಿನ್ನಡೆ…

68
firstsuddi

ಅಮೃತಸರ : ಪಂಜಾಬ್ ವಿಧಾನಸಭೆ ಚುನಾವಣಾ ಫಲಿತಾಂಶಗಳು ಪ್ರಕಟವಾಗುತ್ತಿದೆ. ಆಪ್ ಪಕ್ಷ ಸುಮಾರು 90 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಈ ಬಾರಿ ಅಧಿಕಾರ ಹಿಡಿಯುವುದು ಖಚಿತ ಎಂದು ಹೇಳಲಾಗುತ್ತಿದೆ.

ಫಲಿತಾಂಶದ ಆರಂಭಿಕ ಟ್ರೆಂಡ್ ಗಳಲ್ಲಿ ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಪಂಜಾಬ್ ಲೋಕ ಕಾಂಗ್ರೆಸ್ ನಾಯಕ ಅಮರಿಂದರ್ ಸಿಂಗ್ ಕ್ರಮವಾಗಿ ಚಮಕೂರ್ ಸಾಹಿಬ್, ಅಮೃತಸರ ಪೂರ್ವ ಮತ್ತು ಪಾಟಿಯಾಲ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದು, ಆಪ್ ನ ಜೀವನ್ ಜೋತ್ಬಕೌರ್ ಮುನ್ನಡೆ ಸಾಧಿಸಿದ್ದಾರೆ.