ಮುಂಬೈ : 16ರ ಹರೆಯದ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ನಲ್ಲಿ ಶಿಕ್ಷಕಿ ಸ್ನಾನ ಮಾಡುತ್ತಿದ್ದ ವೀಡಿಯೋವನ್ನು ಸೆರೆಹಿಡಿದಿದ್ದಾನೆ. ಈ ಆಘಾತಕಾರಿ ಘಟನೆ ಪುಣೆಯಲ್ಲಿ ನಡೆದಿದೆ.
ಹುಡುಗನಿಗೆ 10-11 ವರ್ಷದವನಾಗಿದ್ದಗಲಿಂದಲೂ ಶಿಕ್ಷಕಿ ಇಂಗ್ಲಿಷ್ ಹೇಳಿಕೊಡುತ್ತಿದ್ದರು. ಹುಡುಗ ತನ್ನ ಶಿಕ್ಷಕಿ ಸ್ನಾನ ಮಾಡಲು ತೆರಳುವ ಮುನ್ನ ಬಾತ್ರೂಂನಲ್ಲಿ ಮೊಬೈಲ್ ಫೋನ್ ನನ್ನು ಬಚ್ಚಿಟ್ಟಿದ್ದಾನೆ. ಆದರೆ ಒಮ್ಮೆ ಮೊಬೈಲ್ ಫೋನ್ ಬಾತ್ ರೂಂನ ಸೋಪ್ ಬಾಕ್ಸ್ ಹಿಂದೆ ಕಂಡುಬಂದಿದ್ದು, ಶಿಕ್ಷಕಿ ಸ್ನಾನ ಮಾಡುತ್ತಿರುವ ವೀಡಿಯೋ ರೆಕಾರ್ಡ್ ಆಗುತ್ತಿರುವ ಬಗ್ಗೆ ತಿಳಿದುಬಂದಿದೆ.
ನಂತರ ಮೊಬೈಲ್ ಫೋನ್ ಪರಿಶೀಲಿಸಿದ ಶಿಕ್ಷಕಿಗೆ ತನ್ನ ಬೆತ್ತಲೆಯ ಹಳೆಯ ಫೋಟೋ ಹಾಗೂ ವೀಡಿಯೋಗಳನ್ನು ನೋಡಿ ಶಾಕ್ ಆಗಿದ್ದಾರೆ. ಬಳಿಕ ಪುಣೆಯ ಅಲಂಕಾರ್ ಪೊಲೀಸ್ ಠಾಣೆಯಲ್ಲಿ ಹುಡುಗನ ವಿರುದ್ಧ ದೂರು ದಾಖಲಿಸಿದ್ದಾರೆ. ಇದೀಗ ಅಪ್ರಾಪ್ತ ವಿದ್ಯಾರ್ಥಿ ವಿರುದ್ಧ ಐಟಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.










