ಷೇರು ಮಾರುಕಟ್ಟೆಯಲ್ಲಿ ಎಲ್ಐಸಿ ಲಿಸ್ಟಿಂಗ್ ; ಹೂಡಿಕೆದಾರರಿಗೆ 42,500 ಕೋಟಿ ರೂ. ನಷ್ಟ…

54
firstsuddi

ಮುಂಬೈ: ದೇಶದ ಅತಿ ದೊಡ್ಡ ವಿಮಾ ಕಂಪನಿಯಾದ ಭಾರತೀಯ ಜೀವ ವಿಮಾ ನಿಗಮ(ಎಲ್ಐಸಿ) ತನ್ನ ಷೇರುಗಳನ್ನು ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲಿ ಶೇ 8.11ರಷ್ಟು ವಿನಾಯಿತಿ ನೀಡಿ, ಪ್ರತಿ ಷೇರಿಗೆ 872 ರೂ ನಿಗದಿಪಡಿಸಿ ಲಿಸ್ಟ್ ಮಾಡಿತು. ಅದೇ ರೀತಿ, ಇನ್ನೊಂದೆಡೆ, ಬಾಂಬೆ ಷೇರು ಮಾರಕಟ್ಟೆಯಲ್ಲಿ ಶೇ.8.62 ರಷ್ಟು ರಿಯಾಯಿತಿ ದರದೊಂದಿಗೆ 867.2 ರೂ. ಬೆಲೆಯಲ್ಲಿ ಲಿಸ್ಟ್ ಆಗಿದೆ.

ಕೇಂದ್ರ ಸರ್ಕಾರ ಮೇ 4 ರಂದು ಎಲ್ ಐಸಿ ಷೇರನ್ನು ಬಿಡುಗಡೆ ಮಾಡಿತ್ತು. ಐಪಿಒ ವೇಳೆ ಒಂದು ಷೇರಿಗೆ 949 ರೂ. ದರವನ್ನು ನಿಗದಿ ಮಾಡಲಾಗಿತ್ತು. ಇಂದು ಷೇರುಗಳಲ್ಲಿ ರಿಯಾಯಿತಿ ದೊರೆತ ಹಿನ್ನೆಲೆಯಲ್ಲಿ ಎಲ್ ಐಸಿ ಪಾಲಿಸಿದಾರರು ಮತ್ತು ಚಿಲ್ಲರೆ ಹೂಡಿಕೆದಾರರು ಕ್ರಮವಾಗಿ ಪ್ರತಿ ಷೇರನ್ನು 889 ರೂ ಮತ್ತು 904 ರೂಪಾಯಿಗಳಿಗೆ ಖರೀದಿ ಮಾಡಿದರು. ಐಪಿಒ ಮೂಲಕ 20,557 ಕೋಟಿ ರೂ. ಮೊತ್ತವನ್ನು ಸರ್ಕಾರ ಸಂಗ್ರಹಿಸಿದೆ.

ಅಸ್ಥಿರ ಮಾರುಕಟ್ಟೆ ಪರಿಸ್ಥಿತಿಗಳಿಂದಾಗಿ ಎಲ್ ಐಸಿ ಕಳೆದ ತಿಂಗಳು ತನ್ನ ಐಪಿಒ ಗಾತ್ರವನ್ನು ಶೇ. 5 ರಿಂದ ಶೇಕಡ 3.5 ಕ್ಕೆ ಇಳಿಸಿತ್ತು. ಮಾರುಕಟ್ಟೆಯಲ್ಲಿ ಎಲ್ ಐಸಿ ಷೇರು ಲಿಸ್ಟಿಂಗ್ ಆಗುತ್ತಿದ್ದಂತೆ ಹೂಡಿಕೆದಾರರು ಅಂದಾಜು 42,500 ಕೋಟಿ ರೂ ಕಳೆದುಕೊಂಡಿದ್ದಾರೆ.