ರಿಯಾದ್ : ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಸೌದಿ ಅರೇಬಿಯಾ ತನ್ನ ನಾಗರಿಕರನ್ನು ಭಾರತ ಸೇರಿದಂತೆ 15 ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಿದೆ.
ಲೆಬನಾನ್, ಸಿರಿಯಾ, ಟರ್ಕಿ, ಇರಾನ್, ಭಾರತ, ಅಫ್ಘಾನಿಸ್ತಾನ, ಯೆಮೆನ್, ಸೊಮಾಲಿಯಾ, ಇಥಿಯೋಪಿಯಾ, ಲಿಬಿಯಾ, ಇಂಡೋನೇಷಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ವಿಯೆಟ್ನಾಂ, ಅರ್ಮೇನಿಯಾ, ಬೆಲಾರಸ್ ಹಾಗು ವೆನೆಜುವೆಲಾ ದೇಶಗಳಿಗೆ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ.
ಕೆಲವು ದಿನಗಳಿಂದ ಹಲವಾರು ದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿದ್ದು, ಈ ನಡುವೆ ಕೆಲವು ದೇಶಗಳಲ್ಲಿ ಮಂಕಿ ಪಾಕ್ಸ್ ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅಲ್ಲಿನ ಆರೋಗ್ಯ ಸಚಿವಾಲಯ ತಿಳಿಸಿದೆ.










