ಸೋನಿಯಾ ಗಾಂಧಿಗೆ ಉಸಿರಾಟ ಸಂಬಂಧಿತ ಸೋಂಕು – ಚಿಕಿತ್ಸೆ ಮುಂದುವರಿಕೆ!

60
firstsuddi

ನವದೆಹಲಿ : ಕೋವಿಡ್-19 ಸೋಂಕಿನಿಂದಾಗಿ ದೆಹಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಉಸಿರಾಟ ಸಂಬಂಧಿತ ಸೋಂಕು ಕಾಸಿಕೊಂಡಿದ್ದು, ವೈದ್ಯರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿಸಿದ್ದಾರೆ.

ದಾಖಲಾತಿ ಸಂದರ್ಭದಲ್ಲಿ ಅವರಲ್ಲಿ ಲೋವರ್ ರೆಸ್ಪಿರೇಟರಿ ಟ್ರ್ಯಾಕ್ಟ್ ನಲ್ಲಿ ಶಿಲೀಂದ್ರ ಸೋಂಕು (ಶ್ವಾಸಕೋಶ ಸೋಂಕು) ಕೂಡ ಪತ್ತೆಯಾಗಿದೆ. ಅವರಿಗೆ ಪ್ರಸ್ತುತ ಇತರೆ ಕೋವಿಡ್ ನಂತರದ ಲಕ್ಷಣಗಳ ಜತೆಗೆ ಈ ಸಮಸ್ಯೆಗೂ ಕೂಡ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕಾಂಗ್ರೆಸ್ ಪಕ್ಷ ತಿಳಿಸಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 23ರಂದು ಜಾರಿ ನಿರ್ದೇಶನಾಲಯವು ಸೋನಿಯಾ ಗಾಂಧಿ ಅವರಿಗೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಿದೆ. ಅವರ ಪುತ್ರ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈಗಾಗಲೇ ವಿಚಾರಣೆ ಎದುರಿಸುತ್ತಿದ್ದಾರೆ.