ಕೆಫೆ ಕಾಫಿ ಡೇ ಸಂಸ್ಥಾಪಕ, ಕಾಫಿ ಕಿಂಗ್ ಎಂದೇ ಫೇಮಸ್ ಆಗಿದ್ದ ವಿ.ಜಿ ಸಿದ್ದಾರ್ಥ ಹೆಗ್ಡೆಯವರ ಬಯೋಪಿಕ್ ಸದ್ಯದಲ್ಲೇ ಸೆಟ್ಟೇರಲಿದೆ. ಕಾಫಿ ಡೇ ಸಾಮ್ರಾಜ್ಯ ಕಟ್ಟಿ ಬೆಳೆಸಿದ ಸಿದ್ದಾರ್ಥ ಹೆಗ್ಡೆ, ಉದ್ಯಮ ಲೋಕದಲ್ಲಿ ಅಗ್ರ ಸಾಧನೆ ಮಾಡಿದ್ದರು. ಆದರೆ, ಹೆಗ್ಡೆಯವರು 2019ರ ಜುಲೈ 31ರಂದು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದೀಗ ಅವರು ಕಾಫಿ ಡೇ ಕಟ್ಟಿ ಬೆಳೆಸಿದ ರೀತಿ, ಅವರ ಜೀವನದ ಏಳು-ಬೀಳು, ಹೀಗೆ ಹಲವಾರು ವಿಚಾರಗಳನ್ನು ಸಿನಿಮಾದಲ್ಲಿ ತೆರೆದಿಡಲಾಗುತ್ತಿದೆ.
ಸಿದ್ದಾರ್ಥ ಅವರ ಜೀವನದ ಕುರಿತಾಗಿ ‘ಕಾಫಿ ಕಿಂಗ್’ ಎಂಬ ಪುಸ್ತಕವನ್ನೂ ಬರೆಯಲಾಗುತ್ತಿದೆ. ಈ ಪುಸ್ತಕದಲ್ಲಿನ ವಿವರಗಳನ್ನು ಆಧಾರವಾಗಿಟ್ಟುಕೊಂಡು ಬಾಲಿವುಡ್ ನಿರ್ಮಾಣ ಸಂಸ್ಥೆಗಳಾದ ಟಿ ಸೀರಿಸ್ ಫಿಲ್ಮ್ಸ್, ಆಲ್ಮ್ ಲೈಟ್ ಮೋಷನ್ ಪಿಕ್ಚರ್ಸ್ ಮತ್ತು ಕರ್ಮ ಮೀಡಿಯಾ ಎಂಟರ್ ಟ್ಮೇನೆಂಟ್ ಜಂಟಿಯಾಗಿ ಇವರ ಬಯೋಪಿಕ್ ಅನ್ನು ತೆರೆಗೆ ತರಲು ಹೊರಟಿದ್ದಾರೆ. ಈ ಕುರಿತು ಟಿ ಸಿರೀಸ್ ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ. ಸದ್ಯ ಈ ಚಿತ್ರದಲ್ಲಿ ಹೆಗ್ಡೆಯವರ ಪಾತ್ರ ಯಾರು ಮಾಡಲಿದ್ದಾರೆ ಎಂಬುದೇ ಇದೀಗ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.
Showcasing the life account of Coffee Mogul who brewed millions!
T-Series Films ,Prabhleen Sandhu & Almighty Motion Picture in association with Karma Media Entertainment are delighted to have acquired the AV rights to the biography of Entrepreneur par excellence,
— T-Series (@TSeries) June 17, 2022










