ಉದ್ಧವ್ ಠಾಕ್ರೆ ವಿರುದ್ಧ ಮತ್ತೆ ಧ್ವನಿ ಎತ್ತಿದ ಕಂಗನಾ ರಣಾವತ್.

62
firstsuddi

ಮುಂಬೈ : ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಉದ್ಧವ್ ಠಾಕ್ರೆ ವಿರುದ್ಧ ಮತ್ತೆ ಧ್ವನಿ ಎತ್ತಿದ್ದಾರೆ.

ಇನ್​​ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಅವರು, 1975ರ ಬಳಿಕ ಇತಿಹಾಸದಲ್ಲಿ ಇದು ತುಂಬಾ ಮಹತ್ವವಾದ ಸಮಯ. 1975ರಲ್ಲಿ ಜೆಪಿ ನಾರಾಯಣ್ ಅವರ ಘೋಷಣೆಯಿಂದ ಸಿಂಹಾಸನ ಅಲುಗಾಡಿತ್ತು. ಪ್ರಜಾಪ್ರಭುತ್ವ ಎಂಬುದು ಒಂದು ವಿಶ್ವಾಸ. ಅಧಿಕಾರದ ಅಹಂಕಾರದಲ್ಲಿ ಮೆರೆದರೆ ಅಂಥವರ ಪ್ರತಿಷ್ಠೆ ನುಚ್ಚುನೂರಾಗುತ್ತದೆ ಎಂದು ನಾನು 2020ರಲ್ಲೇ ಹೇಳಿದ್ದೆ. ಇದು ಯಾವುದೇ ವ್ಯಕ್ತಿಯ ಶಕ್ತಿ ಅಲ್ಲ. ಇದು ಚರಿತ್ರೆಯ ಶಕ್ತಿ.

ಶಿವನ 12ನೇ ಅವತಾರವೇ ಹನುಮಂತ. ಶಿವನ ಆರಾಧನೆಯನ್ನೂ ಮಾಡುವ ಶಿವಸೇನೆಯು ಹುನುಮಾನ್ ಚಾಲೀಸ್ ಅನ್ನು ಬ್ಯಾನ್ ಮಾಡಲು ಹೊರಟಿತ್ತು. ಹಾಗೇನಾದರೂ ಮಾಡಿದ್ದರೆ ಶಿವನೂ ಅವರನ್ನು ಕಾಪಾಡುವುದಿಲ್ಲ. ಹರಹರ ಮಹಾದೇವ್ ಎಂದು ಆಕ್ರೋಶ ಹೊರಹಾಕಿದ್ದಾರೆ.

ಮುಂಬೈನಲ್ಲಿರುವ ಕಂಗನಾ ರಣಾವತ್ ಅವರ ಕಟ್ಟಡವು ನಿಯಮಬಾಹಿರವಾಗಿ ಕಟ್ಟಿದ್ದಾರೆ ಎಂದು ಆರೋಪಿಸಿ 2020ರಲ್ಲಿ ತೆರೆವುಗೊಳಿಸಲಾಗಿತ್ತು. ಅಲ್ಲಿಂದ ಠಾಕ್ರೆ ಸರ್ಕಾರದ ವಿರುದ್ಧ ಕಂಗನಾ ಸಿಡಿದೆದ್ದಿದ್ದರು.