ನೂಪುರ್ ಶಿರಚ್ಛೇದ ಮಾಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದ ಸಲ್ಮಾನ್ ಚಿಸ್ತಿ ಬಂಧನ…

58
firstsuddi

ರಾಜಸ್ಥಾನ : ಪ್ರವಾದಿ ಮೊಹಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ನೂಪುರ್ ಶರ್ಮಾರ ಶಿರಚ್ಛೇದ ಮಾಡಿದವರಿಗೆ ತನ್ನ ಮನೆ, ಆಸ್ತಿ ಬಹುಮಾನವಾಗಿ ನೀಡುತ್ತೇನೆ ಎಂದು ವೀಡಿಯೋ ಮಾಡಿ ಹರಿಬಿಟ್ಟಿದ್ದ ಅಜ್ಮೇರ್ ದರ್ಗಾದ ವ್ಯವಸ್ಥಾಪಕ ಸಲ್ಮಾನ್ ಚಿಸ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ವಿಡಿಯೋದಲ್ಲೇನಿತ್ತು?: ನೂಪುರ್ ಶರ್ಮಾಳನ್ನು ಶೂಟ್ ಮಾಡಿ ಅಥವಾ ತಲೆ ಕಡಿದು ತನ್ನಿ. ಅವರಿಗೆ ನನ್ನ ಮನೆ, ಆಸ್ತಿಯನ್ನು ನೀಡುತ್ತೇನೆ. ಇದು ಸತ್ಯ. ನಮ್ಮ ಹಿರಿಯರ ಆಣೆ ಎಂದು ಹೇಳಿದ್ದ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಅಜ್ಮೀರ್ ಪೊಲೀಸರು ವೀಡಿಯೋ ಆಧಾರದ ಮೇಲೆ ಸಲ್ಮಾನ್ ಚಿಸ್ತಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ನಿನ್ನೆ ರಾತ್ರಿ ಮನೆಯಲ್ಲಿದ್ದ ಸಲ್ಮಾನ್ ಚಿಸ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.